ಕೈಕಂಬ: ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಫೆ.8ರಂದು ಶನಿವಾರ ರಾತ್ರಿ ದ್ವಜರೋಹಣದೊಂದಿಗೆ ಫೆ.12 ಬುಧವಾರದವರೆಗೆ ಜರುಗಲಿದೆ.ಬೆಳಿಗ್ಗೆ 7ರಂದು ಶುಕ್ರವಾರ ಬೆಳಗ್ಗೆ ಕೋಳಿಕುಂಟ, 8ರಂದು ಶನಿವಾರ ಎಡಪದವು ಗುತ್ತಿನಿಂದ ಭಂಡಾರ ಹೊರಡಿ ದ್ವಜಾರೋಹಣಗೊಳ್ಳುವುದು, ಫೆ.8ರಂದು ಭಾನುವಾರ ದೈವದ ನೇಮ,
ಸೋಮವಾರ ಮಧ್ಯಾಹ್ನ 1ಗಂಟೆಯಿಂದ 4ಗಂಟೆಯವರೆಗೆ ಅನ್ನಸಂತರ್ಪಣೆ, ರಾತ್ರಿ ಶ್ರೀ ಕೊಡಮಣಿತ್ತಾಯ-ಕುಕ್ಕಿನಂತಾಯ ದೈವಗಳ ನೇಮ,ಫೆ.11ರಂದು ಮಂಗಳವಾರ ಸಂಜೆ 6ಗಂಟೆಯಿಂದ ಶ್ರೀ ಬ್ರಹ್ಮಬೈದರ್ಕಳ ನೇಮ, ರಾತ್ರಿ ಗಂಟೆ 2ಕ್ಕೆ “ಮಾಣಿಬಾಲೆ ನೇಮೋತ್ಸವ” ಫೆ.12ರಂದು ಬುಧವಾರ ದ್ವಜಾವರೋಹಣ ನಡೆಯಲಿದೆ.
