ಕುಪ್ಪೆಪದವು:ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಕುಪ್ಪೆಪದವು ಶಾಖೆಯ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಕಾರ್ಯಕ್ರಮ ಸೋಮವಾರ ಜರಗಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಲೀಡ್ ಬ್ಯಾಂಕ್ ನ ಅಧಿಕಾರಿ ಸತೀಶ್ ಅತ್ತಾವರ ಅವರು ಮಾತನಾಡಿ ಆರ್ಥಿಕ ಸೌಲಭ್ಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಗ್ರಾಹಕರಿಗೆ ಇರಬೇಕಾದ ಅರಿವು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಹೊಸ ತಂತ್ರಜ್ಙಾನ ಗಳ ಬಗ್ಗೆ ಮಾಹಿತಿ ನೀಡಿ ಸಮಾಜದ ಎಲ್ಲಾ ವರ್ಗದ ಜನರಿಗೂ ಆರ್ಥಿಕ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.
IMG-20191226-WA0050ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಶಾಖಾ ನಿರೀಕ್ಷಕರಾದ ಸುಧೀರ್ ಕುಮಾರ್ ಮಾತನಾಡಿ ನಮ್ಮ ಬ್ಯಾಂಕ್ ಸತತವಾಗಿ ಬ್ಯಾಂಕಿಂಗ್ ಕ್ಷೇತ್ರದ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶ ಸ್ತಿಗಳನ್ನು ಪಡೆದುಕೊಂಡು ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಮಬಲವಾಗಿ ವ್ಯವಹಾರ ನಡೆಸುತ್ತಿದೆ.ಸಮಾಜದ ಸಾಮಾನ್ಯ ವರ್ಗದ ಜನರಿಗೂ ಆರ್ಥಿಕ ನೆರವು ನೀಡುತ್ತಿದ್ದು ಉತ್ತಮ ಸೇವೆ ನೀಡುತ್ತಿದೆ ಎಂದರು.
ಕುಪ್ಪೆಪದವಿನ ನಿವೃತ್ತ ಶಿಕ್ಷಕ ಭೋಜರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸಹನಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಮಾರಿ ಚಂದ್ರಾವತಿ ಪ್ರಾರ್ಥನೆ ನೆರವೇರಿಸಿದರು.ಎಡಪದವು ವ್ಯ.ಸೇ.ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಹಣಾ ಅಧಿಕಾರಿ ಶಿವರಾಮ ಕಾರಂತ್,ಹಿರಿಯ ನಾಗರೀಕರಾದ ಪ್ರವೀಣ್ ಕುಮಾರ್ ಅಗರಿ,ಬಂಟ್ವಾಳ ಕ್ಯಾಥೋಲಿಕ್ ಸೇ.ಸ .ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾದ ನಮಿತಾ ಪ್ಲಾವಿಯಾ ಡಿ ಸೋಜ ಉಪಸ್ಥಿತರಿದ್ದರು.
ಬ್ಯಾಂಕ್ ನ ಸಿಬ್ಬಂದಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು.ಗಣೇಶ್ ಪಾಕಾಜೆ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಬ್ಯಾಂಕ್ ಸಿಬ್ಬಂದಿ ನಾರಾಯಣ ವಂದಿಸಿದರು.

By Suddi9

Leave a Reply

Your email address will not be published. Required fields are marked *