ಬೆಂಗಳೂರು: ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್ ಪೇಸ್ಟ್ರಿ ಮತ್ತು ಚಾಕೊಲೇಟ್ ಕಲೆಯ ಶ್ರೇಷ್ಠತೆ ಶಿಕ್ಷಣ ಸಂಸ್ಥೆಯಾಗಿದೆ. ವ್ಹೈಟ್‍ಕ್ಯಾಪ್ಸ್ ಅಂತಾರಾಷ್ಟ್ರೀಯ ಬಾಣಸಿಗರಿಂದ ಅವರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಅವರಲ್ಲಿನ ಪ್ರತಿಭೆಯನ್ನು ಹೊರತೆಗೆದು ಅವರನ್ನು ಪೇಸ್ಟಿಸ್ಸೆರೀ ಉದ್ಯಮದ ಅಂತಾರಾಷ್ಟ್ರೀಯ ಮಾನದಂಡಗಳ ಅನ್ವಯ ರೂಪಿಸುತ್ತದೆ. ವ್ಹೈಟ್‍ಕ್ಯಾಪ್ಸ್ ಷೆಫ್ಸ್ ವೈವಿಧ್ಯಮಯ ಅಂತಾರಾಷ್ಟ್ರೀಯ ಜ್ಞಾನ ಮತ್ತು ಕಾರ್ಪೊರೇಟ್ ಅನುಭವದೊಂದಿಗೆ ಬಂದಿದ್ದು ದೇಶವಿದೇಶಗಳಲ್ಲಿ ಮುಂಚೂಣಿಯ ಬೇಕರಿ ಹೌಸ್‍ಗಳು ಹಾಗೂ ಬೇಕರಿ ಚೈನ್‍ಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ವೈಯಕ್ತಿಕ ಸಂತೃಪ್ತಿ ಮತ್ತು ವೃತ್ತಿಯಲ್ಲಿ ಪ್ರಶಂಸೆ ಪಡೆಯಬಹುದು. ವ್ಹೈಟ್‍ಕ್ಯಾಪ್ಸ್ ವಿಶ್ವದಾದ್ಯಂತ ಪೇಸ್ಟ್ರಿ ಇನ್ಸ್‍ಟಿಟ್ಯೂಟ್‍ಗಳೊಂದಿಗೆ ಸಹಯೋಗ ಹೊಂದಿದ್ದು ಪೇಸ್ಟಿಸ್ಸೆರೀ ಉದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನೀಡುತ್ತದೆ. IMG_1719

ಪಠ್ಯಕ್ರಮದಲ್ಲಿ ಕೇಕ್‍ಗಳು, ಫಿಲ್ಲಿಂಗ್‍ಗಳು, ಐಸಿಂಗ್, ಟ್ರಾವೆಲ್ ಕೇಕ್ ಮಾಡುವುದು, ಶಾರ್ಟ್‍ಕ್ರಸ್ಟ್ ಪೇಸ್ಟ್ರಿ, ಪಫ್ ಪೇಸ್ಟ್ರಿ, ಚೌಕ್ಸ್ ಪೇಸ್ಟ್ರಿ, ಮಾಡ್ರನ್ ಫ್ರೆಂಚ್ ಪೇಸ್ಟ್ರಿ, ಚಾಕೊಲೇಟ್ ಗಾರ್ನಿಶಸ್, ಚಾಕೊಲೇಟ್ ಮೌಸ್ಸೆ ಮತ್ತು ಅಸೆಂಬ್ಲಿ ಇತ್ಯಾದಿ ಒಳಗೊಂಡಿರುತ್ತದೆ. ಫೆಬ್ರವರಿ 18, 2019ರಂದು ಈ ಬ್ಯಾಚ್ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ: 08050388102
ಪೇಸ್ಟ್ರಿ ಮತ್ತು ಚಾಕೊಲೇಟ್ ಕಲೆ ಆಹಾರೋದ್ಯಮದಲ್ಲಿ ಅತ್ಯಂತ ಶ್ರೇಷ್ಠ ಕಲೆಗಳಲ್ಲಿ ಒಂದೆನಿಸಿದೆ. ಇದಕ್ಕೆ ಫ್ರಾನ್ಸ್, ಲಂಡನ್ ಮತ್ತು ಇಟಲಿಗಳಲ್ಲಿ ಅಪಾರ ಬೇಡಿಕೆಯಿದ್ದು ಅಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರತಿನಿಧಿಗಳಾಗಿ ಅವರ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಉತ್ಸುಕರಾಗಿರುತ್ತಾರೆ.

IMG_1695
ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್‍ನ ಮಾರ್ಕೆಟಿಂಗ್ ಡೈರೆಕ್ಟರ್ ವೇದ್‍ಕಿರಣ್, “ಇಲ್ಲಿವರೆಗೆ ನಮ್ಮಲ್ಲಿ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದು ದೇಶಾದ್ಯಂತ ಉದ್ಯಮಗಳು, ದೊಡ್ಡ ಬ್ರಾಂಡ್‍ಗಳು ಮತ್ತು ಜಾಗತಿಕವಾಗಿ ಕೇಕ್/ಪೇಸ್ಟ್ರಿ ಉದ್ಯಮದಲ್ಲಿ ಉದ್ಯೋಗ ಪಡೆದಿದ್ದಾರೆ” ಎಂದರು.Chocolate Showpiece 26th Nov

ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್ ಕುರಿತು:

ನವೆಂಬರ್ 2016ರಂದು ಪ್ರಾರಂಭವಾದ ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್ ಸ್ಕೂಲ್ ಆಫ್ ಪೇಸ್ಟ್ರಿ ಸಮಾಜದ ಎಲ್ಲ ವರ್ಗಗಳೂ ವ್ಹೈಟ್‍ಕ್ಯಾಪ್ಸ್ ಕೋರ್ಸ್‍ಗಳಲ್ಲಿ ಸೇರುವ ಮೂಲಕ ತಮ್ಮ ಆಸಕ್ತಿಯಲ್ಲಿ ತೊಡಗಿಕೊಳ್ಳುವ ಪರಿಸರ ಸೃಷ್ಟಿಸುವ ಉದ್ದೇಶ ಹಾಗೂ ಅವರಲ್ಲಿನ ಬೇಕಿಂಗ್ ಮತ್ತು ಚಾಕೊಲೇಟ್ ಮೇಕಿಂಗ್ ಕೌಶಲ್ಯಗಳನ್ನು ಬೆಳೆಸಲು ಉದ್ದೇಶಿಸಿದೆ. ವ್ಹೈಟ್‍ಕ್ಯಾಪ್ಸ್ ಇಂಟರ್‍ನ್ಯಾಷನಲ್ ಸ್ಕೂಲ್ ಆಫ್ ಪೇಸ್ಟ್ರಿ ಭಾರತದ ಅತ್ಯಂತ ಪ್ರಮುಖ ಅಡುಗೆ ಸಂಸ್ಥೆಗಳಲ್ಲಿ ಒಂದಾಗಿದ್ದು ಪೇಸ್ಟಿಸ್ಸೆರೀ ಮತ್ತು ಚಾಕೊಲೇಟ್ ಕಲೆಯಲ್ಲಿ ಪ್ರತಿನಿತ್ಯ ಹೊಸ ಎತ್ತರಗಳನ್ನು ಸಾಧಿಸುತ್ತಿದೆ. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸಿದ್ದಾರೆ ಮತ್ತು ವಿವಿಧ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಕೋರ್ಸ್ ಮುಗಿದ ನಂತರ ಜಾಗತಿಕ ಉದ್ಯೋಗಾವಕಾಶಗಳು

By suddi9

Leave a Reply

Your email address will not be published. Required fields are marked *