ಮೂಡುಬಿದಿರೆ: ಕಳೆದ ಕೆಲವು ಸಮಯಗಳಿಂದ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಮತ್ತು ಸವಾರರಿಗೆ ಹಾನಿಯುಂಟು ಮಾಡುತ್ತಿದ್ದ ರಸ್ತೆಯನ್ನು ಗ್ರಾಮದ ಯುವಕರೆಲ್ಲರೂ ಒಟ್ಟು ಸೇರಿ ಶ್ರಮದಾನದ ಮೂಲಕ ಹೊಂಡಗಳಿಗೆ ದುರಸ್ಥಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

???????????????????????????????
ಮೂಡುಬಿದಿರೆ-ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ಕೂಡುರಸ್ತೆಯಾಗಿರುವ ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೆಲ್ಲಿಸ್ ನಗರದಿಂದ ಸುಮಾರು 10 ಕಿ.ಮೀ ರಸ್ತೆಯಿದ್ದು ಇದರಲ್ಲಿ 7 ಕಿ.ಮೀಟರ್‍ನಷ್ಟು ದೂರದ ರಸ್ತೆಯು ಕೆಲವು ಕಡೆಗಳಲ್ಲಿ ಹೊಂಡಗಳಿದ್ದು ಸಂಚಾರ ದುಸ್ತರವಾಗಿತ್ತು.

???????????????????????????????

???????????????????????????????
ಹೊಸಬೆಟ್ಟು ಚರ್ಚಿನ ಧರ್ಮಗುರು ಸಂತೋಷ್ ರೊಡ್ರಿಗಸ್ ಅವರ ಮಾರ್ಗದರ್ಶನದಲ್ಲಿ ಚರ್ಚಿನ ಉಪಾಧ್ಯಕ್ಷ ವಿವಿಯನ್ ಕುಲಾಸೋ ಹಾಗೂ ಲಿಯೋ ವಾಲ್ಟರ್ ನಜ್ರತ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನ ನಡೆಸಿ, ಜಲ್ಲಿ, ಮರಳು, ಸಿಮೆಂಟ್‍ನ್ನು ಬಳಸಿ ರಸ್ತೆಯುದ್ದಕ್ಕೂ ಇದ್ದ ಹೊಂಡಗಳನ್ನು ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟು ಮಾದರಿಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *