ಮೂಡುಬಿದಿರೆ: ಕೋಣಗಳಿಗೆ ಬೆತ್ತದಿಂದ ಹೊಡೆಯದೆ, ಬೆತ್ತ ತೋರಿಸಿದರೆ ತಪ್ಪಿಲ್ಲ. ಕಂಬಳವನ್ನು ವಿರೋಧಿಸಿದ ಪ್ರಾಣಿದಯಾ ಸಂಘದವರು ಬೀದಿ ನಾಯಿಗಳ ಬಗ್ಗೆಯೂ ಗಮನಹರಿಸಬೇಕು. ಕಾನೂನು ಕೊಟ್ಟ ಆದೇಶ ಯಾವುದನ್ನು ನಾವು ಉಲ್ಲಂಘನೆ ಮಾಡದೆ, ನಮ್ಮ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದೆ. ಪೇಟಾದವರು ಕೋಣದ ಬಗ್ಗೆ ನಿಗಾವಿರಿಸುವ ಮೊದಲು ಬೀದಿ ನಾಯಿಗಳ ಬಗ್ಗೆಯೂ ಕಾಳಜಿವಹಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

???????????????????????????????
ಮೂಡುಬಿದಿರೆ ಒಂಟಿಕಟ್ಟೆಯಲ್ಲಿರುವ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ-ಚೆನ್ನಯ ಹದಿನಾರನೇ ವರ್ಷದ ಜೋಡುಕರೆ ಕಂಬಳದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬುದ್ಧಿಜೀವಿಗಳು ಕಂಬಳಕ್ಕೆ ಹಿಂಸೆಯ ಸ್ವರೂಪ ನೀಡಿದ್ದಾರೆ. ಹಿಂಸೆರಹಿತವಾಗಿಯೇ ಕಂಬಳ ನಡೆಯುತ್ತಿದೆ. ನಾನು ಮುಖ್ಯಮಂತ್ರಿ, ಕೇಂದ್ರ ಕಾನೂನು ಮಂತ್ರಿಯಾದ ಸಂದರ್ಭದಲ್ಲಿ ಕಂಬಳ ಉಳಿವಿಗೆ ಕಾನೂನು ರೀತಿಯ ಹೋರಾಟಕಕ್ಕೆ ಜೈಜೋಡಿಸಿದ್ದೇನೆ. ಮುಂದೆಯೂ ನಮ್ಮ ನಾಡಿನ ಪರಂಪರೆ ಉಳಿಯಲು ಹೋರಾಟದಲ್ಲಿ ತೊಡಗಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಉಪಾಧ್ಯಕ್ಷೆ ಕಸ್ತೂರಿಪಂಜ ಸಹಿತ ಗಣ್ಯರು ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *