ಮೂಡುಬಿದಿರೆ:ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯಕ್ತ ಇಲ್ಲಿನ ಕೋಟೆಬಾಗಿಲು ಪರಿಸರದ ನಾಲ್ಕು ಮಸೀದಿ ವ್ಯಾಪ್ತಿಗೊಳಪಡುವ ಮುಸ್ಲಿಂ ಬಾಂಧವರು ಬುಧವಾರ ಈದ್‍ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಮರಿಯಾಡಿಯಿಂದ ಮುಖ್ಯರಸ್ತೆಯಲ್ಲಿ ಕೋಟೆಬಾಗಿಲು ತನಕ ವಾಹನ ಜಾಥಾದೊಂದಿಗೆ ಬಂದರು. ಅಲ್ಲಿ ಕೋಟೆಬಾಗಿಲಿನ ಎರಡು ಮಸೀದಿ ಹಾಗೂ ಚಾಮುಂಡಿ ಬೆಟ್ಟ ಮಸೀದಿಯ ಮುಸ್ಲಿಂ ಬಾಂಧವರೊಂದಿಗೆ ಸೇರಿಕೊಂಡು ಮುಖ್ಯ ರಸ್ತೆಯಲ್ಲಿ ಬೆಟ್ಗೇರಿ ತನಕ ಹೊರಟ ಜಾಥಾ ಅಲ್ಲಿಂದ ಒಳಮಾರ್ಗದಲ್ಲಿ ದರ್ಗಾಕ್ಕೆ ತೆರಳಿ ಮೆರವಣಿಗೆ ಸಮಾಪನಗೊಂಡಿತು.
