ಪೊಳಲಿ: ಸಾರ್ವಜನಿಕ ಶಿಕ್ಷಣ ಇಲಾಖೇಯಿಂದ ನಡೆಸಲಾದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಲ್ಲಿನ ಪೊಳಲಿ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಪ್ರೀತಿಕಾ.ಕೆ ಇವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಜಯಂತ್ ಸಾಲ್ಯಾನ್ ಮತು ದೀಪಿಕಾ ಇವರ ಪುತ್ರಿ. ಶ್ರೀ ರಾಮಕೃಷ್ಣ ತಪೋವನದಲ್ಲಿ ನಡೆಯುವ ಕರಾಟೆ ತರಬೇತಿಯ ತರಬೇತುದಾರರಾದ ವೆನಿಲ್ಲಾರವರ ಶಿಷ್ಯೆಯಾಗಿದ್ದಾರೆ.
