ಕೈಕಂಬ:ಸೈಂಟ್ರೇಮಂಡ್ಸ್ ಪದವಿ ಪೂರ್ವಕಾಲೇಜು, ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳ ಹಳೆ ವಿದ್ಯಾರ್ಥಿ ಸಮಾಗಮ ಪದವಿಪೂರ್ವಕಾಲೇಜು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಸಂಚಾಲಕರಾದ ಭಗಿನಿ ಮಾರಿಯೋಲಾ, ಹಳೆವಿದ್ಯಾರ್ಥಿಗಳು ಕಲಿತ ವಿದ್ಯಾಸಂಸ್ಥೆಯೊಂದಿಗೆ ಆತ್ಮೀಯ ಬಾಂಧವ್ಯವನ್ನುಇಟ್ಟುಕೊಂಡು ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ಸಹಕರಿಸಬೇಕೆಂದು ಕರೆಯಿತ್ತರು. 2018ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಉಪಾಧ್ಯಕ್ಷರಾಗಿ ರೋಬಿನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಮೆಲಿಟಾರವರನ್ನು ಸರ್ವಾನುಮತದಿಂದಆಯ್ಕೆಯಾದರು.
ಉಳಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ಹಿರಿಯ ಉಪನ್ಯಾಸಕಿ ಹರಿಣಾಕ್ಷಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸಾಧನಾ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ರೋಶ್ನಿ, ಪದವಿ ಕಾಲೇಜು ಪ್ರಾಚರ್ಯರಾದ ಭಗಿನಿ ಸಗಾಯ ಸೆಲ್ವಿ ಉಪಸ್ಥಿತರಿದ್ದರು. ಪದವಿ ಪೂರ್ವಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅನಿತಾ ಫೆರಾವೋ ಅತಿಥಿಗಣ್ಯರನ್ನು ಸ್ವಾಗತಿಸಿದರು. ಗೀತಾ ವಂದಿಸಿದರು ಹಾಗೂ ಅವಿಲ್ರೆನಿಲ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.
