ಕೈಕಂಬ: ರಾಷ್ಟ್ರೀಯ ಹೆದ್ದಾರಿ ೧೯೬ರ ಗುರುಪುರ ಸೇತುವೆಗೆ ಅನತಿ ದೂರದ ಕುಕ್ಕುದಕಟ್ಟೆಯಲ್ಲಿ ಭಾನುವಾರ ಸಂಜೆ ನಡೆದ ಭೀಕರ ಕಾರು-ಸ್ಕೂಟಿ ಅಪಘಾತದಲ್ಲಿ ಗುರುಪುರ ನಿವಾಸಿ, ಕಂಬಳ ಖ್ಯಾತಿಯ ಕೆದುಬರಿ ಗುರುವಪ್ಪ ಪೂಜಾರಿ (೭೮) ನಿಧನರಾದರು.

ಕೃಷಿಕರಾಗಿರುವ ಇವರು ಬಾಲ್ಯದಿಂದಲೇ ಕಂಬಳದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ಕಂಬಳದ ಕೋಣ ಹೊಂದಿದ್ದಾರೆ. ಹಲವು ಕಂಬಳಗಳಲ್ಲಿ ಪದಕ ಗಳಿಸಿರುವ ಇವರು ಇತ್ತೀಚಿನ ಕೆಲವು ವರ್ಷಗಳಿಂದ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿದ್ದರು. ಇವರನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.
ಇವರು ಎಂದಿನಂತೆ ಕುಕ್ಕುದಕಟ್ಟೆಯಲ್ಲಿರುವ ಡೈರಿಗೆ ಹಾಲು ಹಾಕಲು ತನ್ನ ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ಮಂಗಳೂರಿನಿಂದ ಗುರುಪುರದತ್ತ ಡಿಸೈರ್ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಅಪ್ಪಚ್ಚಿಯಾಗಿದ್ದು, ಗುರುವಪ್ಪನವರು ರಸ್ತೆಗೆ ಅಪ್ಪಳಿಸಿದ್ದಲ್ಲದೆ, ಅವರ ಕೈಯಲ್ಲಿದ್ದ ಹಾಲಿನ ಕ್ಯಾನ್ ರಸ್ತೆಯಿಂದ ದೂರ ಬಿದ್ದಿದೆ. ತಲೆ, ಕೈಕಾಲಿಗೆ ಗಂಭೀರ ಗಾಯವಾಗಿದ್ದ ಅವರನ್ನು ತಕ್ಷಣ ಗುರುಪುರದ ಸೇವಾ ಬ್ರಿಗೇಡ್ ಆ್ಯಂಬುಲೆನ್ಸ್ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಕಂಬಳ ಪ್ರೇಮಿಗಳನ್ನು ಅಗಲಿದ್ದಾರೆ.
ಅವರು ಕೃಷಿಕರಾಗಿಯೂ ಗುರುತಿಸಿಕೊಂಡ ಅವರು ಹೈನುಗಾರಿಕೆ ಮಾಡುತ್ತಿದ್ದು ಇಂದು ಆ.೮ರಂದು ಭಾನುವಾರ ಸಂಜೆ ತನ್ನ ದ್ವಿಚಕ್ರ ವಾಹನದಲ್ಲಿ ಕುಕ್ಕುದಕಟ್ಟೆ ಡೈರಿಗೆ ಹಾಲು ಕೊಂಡೋಗುವಾಗ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವ ಇಲ್ಲಿನ ಇಳಿಜಾರು ರಸ್ತೆಯಲ್ಲಿ, `ಭವಿಷ್ಯದಲ್ಲಿ ಅಪಘಾತ ವಲಯವಾಗಲಿದೆ’ ಆದರೆ ಇಂದು ವಯೋವೃದ್ಧರೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ಆದರು ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

