ಕೈಕಂಬ: ಆಟೋ ರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರರಿಗೆ ಗಾಯವಾದ ಘಟನೆ ಗುರುವಾರ ಸಂಜೆ ಕುಪ್ಪೆಪದವು ಸಮೀಪದ ಕಾಡಕ್ಕೇರಿ(ಬೊಳಿಯ ಕ್ರಾಸ್)ಎಂಬಲ್ಲಿ ನಡೆದಿದೆ.ಕಲ್ಲಾಡಿ ಕಡೆಯಿಂದ ಕುಪ್ಪೆಪದವಿಗೆ ಬರುತ್ತಿದ್ದ ರಿಕ್ಷಾಕ್ಕೆ ಎದುರುಗಡೆಯಿಂದ ಬಂದ ಬೈಕ್ ಗುದ್ದಿದ ಪರಿಣಾಮ ರಿಕ್ಷಾ ಮತ್ತು ಬೈಕ್ ಮಗುಚಿ ಬಿದ್ದು ರಿಕ್ಷಾ ಚಾಲಕ ಉದಯ ಹಾಗೂ ಬೈಕ್ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.6v riksa

ರಿಕ್ಷಾ ಜಖಂಗೊಂಡಿದ್ದು, ಬೈಕ್ ಭಾಗಷಃ ಹಾನಿಗೊಂಡಿದೆ.
ಇ ಪ್ರದೇಶ ಅಪಾಯಕಾರಿಯಾಗಿದ್ದು ಕುಪ್ಪೆಪದವು-ಇರುವೈಲು ರಸ್ತೆಗೆ ಇಲ್ಲಿ ಬೊಳಿಯ ರಸ್ತೆ ಸೇರುತ್ತಿದ್ದು, ವಾಹನ ಸವಾರರಲ್ಲಿ ಗೊಂದಲ ಉಂಟಾಗಿ ಅಪಘಾತಗಳು ಸರ್ವೇಸಾಮಾನ್ಯವಾಗಿವೆ.
ಇಲ್ಲಿ ಹಂಪ್ಸ್ ಅಳವಡಿಸಿ ಅಪಘಾತಗಳನ್ನು ತಡೆಯಬೇಕು ಎಂದು ಲೋಕೋಪಯೋಗಿ ಇಲಾಖೆಯನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ

By Suddi9

Leave a Reply

Your email address will not be published. Required fields are marked *