ಕೈಕಂಬ : ಗುರುಪುರ ಕುಕ್ಕುದಕಟ್ಟೆಯಲ್ಲಿ ಭಾನುವಾರ ಸಂಜೆ ಕಾರು-ಸ್ಕೂಟಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಸ್ಕೂಟಿ ಸವಾರ, ಕಂಬಳ ಯಜಮಾನ, ಪ್ರಗತಿಪರ ಕೃಷಿಕರಾಗಿದ್ದ ಕೆದುಬರಿ ಗುರುವಪ್ಪ ಪೂಜಾರಿ ಅವರ ಅಂತ್ಯ ಸಂಸ್ಕಾರ ಸೋಮವಾರ ಮಧ್ಯಾಹ್ನ ಕೆದುಬರಿಯಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಿತು.gur-aug-9-Dr.bharath-1ಅಂತ್ಯ ಸಂಸ್ಕಾರದಲ್ಲಿ ಊರವರು, ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು, ಕಂಬಳಾಭಿಮಾನಿಗಳು, ಕಂಬಳ ಯಜಮಾನರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಮಾಧ್ಯಮ ಪ್ರತಿನಿಧಿಯೊಂದಿಗೆ ಜಿಲ್ಲಾ ಕಂಬಳ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ಮಾತನಾಡಿ,  ”ಕಂಬಳದ ಕೋಣಗಳನ್ನು ಪಳಗಿಸುವುದರಲ್ಲಿ ಗುರುವಪ್ಪರು ಎತ್ತಿದ ಕೈ. ೭೫ರ ಹರೆಯದಲ್ಲೂ ಯುವಕರನ್ನು ನಾಚಿಸುವಂತಹ ಕಂಬಳ ಕೌಶಲ್ಯ ಅವರಲ್ಲಿತ್ತು. ಕಂಬಳದಲ್ಲಿ ತನ್ನ ಕೋಣಗಳಿಗೆ ಮೆಡಲ್ ಲಭಿಸದಿದ್ದರೂ ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದ ಕೋಣಗಳ ಅಪೂರ್ವ ಯಜಮಾನ, ಕಂಬಳಕೂಟದ ಅಜಾತಶತ್ರುವಿನಂತಿದ್ದರು. ಗುರುವಪ್ಪರ ಆಕಸ್ಮಿಕ ಅಗಲುವಿಕೆ ಕಂಬಳ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಗದ್ಗದಿತರಾಗಿ ನುಡಿದರು.gur-aug-9-Dr.bharath-2ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ವಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ, ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ಕಂಬಳ ಸಮಿತಿ ಅಧ್ಯಕ್ಷ, ಸತೀಶ್‌ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ(ಯಜಮಾನ), ಚಂದ್ರಹಾಸ ಸಾಧು ಸನಿಲ್ ಹೊಸಬೆಟ್ಟು ಯೆರಿಮಾರು ಬರ್ಕೆ(ಯಜಮಾನ, ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ), ಪಿ ಆರ್ ಶೆಟ್ಟಿ(ಅಧ್ಯಕ್ಷ, ಜಿಲ್ಲಾ ಕಂಬಳ ಸಮಿತಿ), ಗುಣಪಾಲ ಕಡಂಬ, ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ಹಿರಿಯರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.gur-aug-9-navinchandra alva

By Suddi9

Leave a Reply

Your email address will not be published. Required fields are marked *