ಬಂಟ್ವಾಳ:ಕಳೆದ ಸಾಲಿನಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತ ಶೈತ್ಯಾಗಾರ ಕೊಡುಗೆ ನೀಡುವ ಮೂಲಕ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಬಿ.ಸಿ.ರೋಡು ಹೇಳಿದ್ದಾರೆ.ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಬುಧವಾರ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನ ಲೆಕ್ಕಪತ್ರ ಮಂಡನೆ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಸದಸ್ಯರಿಂದ ಸನ್ಮಾನ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

21btl-Lions
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಸಂತ ಬಿ.ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಮಾಜಿ ಗವರ್ನರ್ ಡಾ.ಗೀತ್ ಪ್ರಕಾಶ ಶೆಟ್ಟಿ, ಮಾಜಿ ಗವರ್ನರ್ ದೇವದಾಸ ಭಂಡಾರಿ, ಮಾಜಿ ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.ಕ್ಲಬ್ಬಿನ ಮಾಜಿ ಅಧ್ಯಕ್ಷ ಕೃಷ್ಣ ಶ್ಯಾಂ, ಮಾಜಿ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್., ಸಲಹೆಗಾರ ರಾಧಾಕೃಷ್ಣ ರೈ, ಗಾಯತ್ರಿ ಗೀತ್ ಪ್ರಕಾಶ್, ಜಯಂತಿ ಸಂಜೀವ ಶೆಟ್ಟಿ ಮತ್ತಿತರರು ಇದ್ದರು.

ಪ್ರಾಂತೀಯ ಕಾರ್ಯದಶರ್ಿ ಮಧ್ವರಾಜ್ ಬಿ.ಕಲ್ಮಾಡಿ ವರದಿ ಮತ್ತು ಕೋಶಾಧಿಕಾರಿ ಸುನಿಲ್ ಬಿ.ಅಪೂರ್ವ ಲೆಕ್ಕಪತ್ರ ಮಂಡಿಸಿದರು. ಡಾ.ದಿವ್ಯಾ ವಸಂತ ಶೆಟ್ಟಿ ಪ್ರಾರ್ಥಿಸಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಸತೀಶ ಕುಡ್ವ ಸ್ವಾಗತಿಸಿ, ಸದಸ್ಯ ವಾಲ್ಟರ್ ನೊರೋಹ್ನ ವಂದಿಸಿದರು. ಮಾಜಿ ವಲಯಾಧ್ಯಕ್ಷ ದಾಮೋದರ ಬಿ.ಎಂ.ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *