ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್‌ನ ಪಿಡಿಒ ನಯನ ಅವರ ಮನವಿ ಮೇರೆಗೆ `ಗಿರ್‌ಗಿಟ್’ ಚಿತ್ರ ಖ್ಯಾತಿಯ ರೂಪೇಶ್ ಶೆಟ್ಟಿಯವರು ಬುಧವಾರ ಕರಿಯಂಗಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕಡು ಬಡವರಿಗೆ ದಿನಸಿ ಕಿಟ್ ವಿತರಿಸಿತು. ಚಿತ್ರದ ನಿರ್ಮಾಪಕರಾದ ದೀಕ್ಷಿತ್ ಆಳ್ವ, ಮಂಜುನಾಥ ಅತ್ತಾವರ, ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಇದ್ದರು.
ರೂಪೇಶ್ ಶೆಟ್ಟಿ ತಂಡವು ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ೪,೦೦೦ ಅರ್ಹ ಕಡು ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿತ್ತು. ಕರಿಯಂಗಳ ಗ್ರಾಮದ ಪೊಳಲಿ, ಕಲ್ಕುಟ್ಟ, ಕಿನ್ನಿಗುಡ್ಡೆ, ಸಾಣೂರುಪದವು,ಪುಂಚಮೆ, ಗುಂಡಿಕುಮೇರ್, ಬಡಕಬೈಲ್ ಇಲ್ಲಿಯ ಕಡು ಬಡವರಿಗೆ ಕಿಟ್ ಹಂಚಲಾಯಿತು.
ಇವರ ಈ ಸಮಾಜಮುಖಿ ಕಾರ್ಯಕ್ಕೆ ಕರಿಯಂಗಳ ಗಾಮ. ಪಂಚಾಯತ್‌ನ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷೆ ವೀಣಾ ಆಚಾರ್ಯ, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಸಂಪೂರ್ಣ ಸಹಕರಿಸಿದರು.
“ಪ್ರಸಕ್ತ ಸಂಕಷ್ಟದ ಕಾಲದಲ್ಲಿ ಇದೊಂದು ದೇವರ ಕಾರ್ಯ ಎಂದು ನಾವು ನಂಬಿದ್ದೇವೆ. ಎಲ್ಲರ ಕಷ್ಟ ಶೀಘ್ರ ದೂರವಾಗಲಿ. ಭವಿಷ್ಯದಲ್ಲಿ ಕೊರೊನಾ ಬರದಿರಲಿ ಮತ್ತು ಎಲ್ಲರೂ ಕೆಲಸ ಮಾಡಿಕೊಂಡು ಜೀವನ ಸಾಗಿಸುವಂತಹ ವಾತಾವರಣ ಸೃಷ್ಟಿಯಾಗಲಿ. ಕರಿಯಂಗಳ ಗ್ರಾಮದಲ್ಲಿ ಪಂಚಾಯತ್ ಗುರುತಿಸಿದ ಕುಟುಂಬಗಳು ನಿಜಕ್ಕೂ ದಿನಸಿ ಪಡೆಯಲು ಅರ್ಹವಾಗಿವೆ. ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವು ನೈಜ ಅರ್ಹ ಹಸಿದವರನ್ನು ಗುರುತಿಸಿದೆ” ಎಂದು ರೂಪೇಶ್ ಶೆಟ್ಟಿ ತಿಳಿಸಿದರು.


