ಬಂಟ್ವಾಳ:  ವಿಶ್ವದಲ್ಲಿಯೇ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸಂಸ್ಕೃತಿ ಯ  ಪ್ರಜ್ಞೆ ಮೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್  ಅವರು ಹೇಳಿದ್ದಾರೆ. ಬಂಟ್ವಾಳ ತಾಲೂಕಿನ  ಸಿದ್ದಕಟ್ಟೆ ಯ ಹರ್ಷಲಿ ಸಭಾಭವನದಲ್ಲಿ ನಡೆದ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ತಾಲೂಕು ಘಟಕದ ಅಭ್ಯಾಸವರ್ಗ -2020 ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. IMG-20201108-WA0028

ಅಭ್ಯಾಸವರ್ಗದ ಪ್ರಥಮ ಅವಧಿ ಶಾಖೆ ಮತ್ತು ಸಂಚಲನವನ್ನು  ಮಂಗಳೂರು ವಿಭಾಗ ಸಂಘಟನಾ  ಕಾರ್ಯದರ್ಶಿಗಳಾದ  ಬಸವೇಶ್ ಕೋರಿ ವಿಚಾರ ಮಂಡಿಸಿದರೆ, ದ್ವಿತೀಯ ಅವಧಿ ಸೈದ್ದಾಂತಿಕ ಭೂಮಿಕೆ ಯನ್ನು ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಅವರು ವಿಚಾರ ಮಂಡಿಸಿದರು. ತೃತೀಯ ಅವಧಿಯಲ್ಲಿ ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಜೈನ್ ಕಾರ್ಕಳ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ  ಕಂಬಳ ಓಟಗಾರಿಕೆಯ ಮೂಲಕ ಪ್ರಸಿದ್ಧಿ ಪಡೆದು ಕರ್ನಾಟಕ ದ ಪ್ರತಿಷ್ಟಿತ ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತ ಸುರೇಶ್ ಎಂ.ಶೆಟ್ಟಿ ಹಕ್ಕೇರಿ ಅವರನ್ನು ಸನ್ಮಾನಿಸಲಾಯಿತು.   IMG-20201108-WA0033

ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಹಾಗೂ ಸಿದ್ದಕಟ್ಟೆ ನಗರದ ನೂತನ ಕಾರ್ಯಕಾರಿಣಿ ಯನ್ನು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಘೋಷಿಸಿದರು .ಸಮಾರೋಪದಲ್ಲಿ ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು ,ಜಿಲ್ಲಾ ಸಂಚಾಲಕರಾದ ಸಂದೇಶ್ ರೈ ಮಜಕ್ಕಾರ್ ಉಪಸ್ಥಿತರಿದ್ದರು.ಅಭ್ಯಾಸ ವರ್ಗದಲ್ಲಿ ವಿದ್ಯಾರ್ಥಿ ಪರಿಷತ್ ನ ಹಿತೈಷಿಗಳಾದ ತಾಪಂ ಸದಸ್ಯ ಪ್ರಭಾಕರ ಪ್ರಭು, ಮಾಜಿ ತಾಪಂ ಸದಸ್ಯ ರತ್ನ ಕುಮಾರ್ ಚೌಟ, ಪ್ರಮುಖರಾದ     ಉಮೇಶ್ ಗೌಡ , ದೀಪಕ್ ಶೆಟ್ಟಿಗಾರ್ ,  ಮಂದಾರತಿ , ಮಾಧವ ಶೆಟ್ಟಿಗಾರ್ , ವಿಶ್ವನಾಥ ಶೆಟ್ಟಿಗಾರ್ ,ಮಹೇಶ್ ಕರ್ಕೇರ ,ಸತೀಶ್ ಪೂಜಾರಿ ಅಳಕೆ,ರಾಜೇಶ್ ಕೊನೆರೊಟ್ಟು ಮುಂತಾದ ಗಣ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *