ಬಂಟ್ವಾಳ: ತಾಲೂಕಿಗೆ ಒಟ್ಟು 4 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯವನ್ನು ಮಾಡದೆ ಅರ್ಹ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ. ರವಿವಾರ ಕಳ್ಳಿಗೆ ನೆತ್ತರಕೆರೆ ಹಿ.ಪ್ರಾ.ಶಾಲೆಯಲ್ಲಿ ನವೋದಯ ಮಿತ್ರ ಕಲಾವೃಂದ ಹಾಗೂ ನೇತ್ರಾವತಿ ಮಾತೃಮಂಡಳಿ ವತಿಯಿಂದ ಕಲಾವೃಂದಕ್ಕೆ ಲಭಿಸಿದ ಈ ಬಾರಿಯ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜಕ್ಕೆ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ಬಡವರ ನಿಸ್ವಾರ್ಥ ಸೇವೆ, ಸಹಕಾರ, ರಾಷ್ಟ್ರ ಜಾಗೃತಿ ಮೂಲಕ ಯುವಶಕ್ತಿ ನಿರ್ಮಾಣ ಮುಂತಾದ ಹತ್ತುಹಲವು ಪ್ರಾಮಾಣಿಕ ಸೇವಾ ಗುಣಗಳಿಂದ ನೆತ್ತರಕೆರೆ ನವೋದಯ ಮಿತ್ರಕಲಾ ವೃಂದಕ್ಕೆ ಮೊದಲ ಆದ್ಯತೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ತಾನಾಗೇ ಲಭಿಸಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ರಾಷ್ಟ್ರ ಚಿಂತನೆಯ ತತ್ವಾದರ್ಶದಲ್ಲಿ ಸಂಘ ಕಾರ್ಯನಿರ್ವಹಿಸಿದ ಕಾರಣ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವದ ಹೆಗ್ಗಳಿಕೆ ಲಭಿಸಿದೆ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚುತ್ತದೆ. ಇನ್ನಷ್ಟು ಸಾಮಾಜಿಕ ಚಟುವಟಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸುವಂತಾಗಲಿ ಎಂದು ಆಶೀರ್ವದಿಸಿದರು.

ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ, ಸಮಾಜಮುಖಿ ಚಿಂತನೆಯ ಯುವಕರ ಸಂಘಟನೆಯು ಹಲವು ಸವಾಲುಗಳ ಮಧ್ಯೆಯೂ ನೆತ್ತರಕೆರೆಯನ್ನು ಬೆಳೆಸಿದ್ದಾರೆ. ಗ್ರಾಮ ವಿಕಾಸದ ಕಾರ್ಯದ ಮೂಲಕ ಹತ್ತೂರಿಗೂ ನೆತ್ತರಕೆರೆಯ ಹೆಸರನ್ನು ತಲುಪಿಸಿದ್ದಾರೆ ಎಂದರು.ನವೋದಯ ಮಿತ್ರ ಕಲಾವೃಂದದ ಅಧ್ಯಕ್ಷ ಬಿ.ಸುರೇಶ್ ಭಂಡಾರಿ ಅರ್ಬಿ ಅಧ್ಯಕ್ಷತೆ ವಹಿಸಿದ್ದರು. ನೇತ್ರಾವತಿ ಮಾತೃ ಮಂಡಳಿ ಅಧ್ಯಕ್ಷೆ ವಸಂತಿ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವದಾಸ್ ಮಾಸ್ತರ್ ಕೊಡ್ಮಾಣ್, ಸದಾಶಿವ ಡಿ.ತುಂಬೆ, ಭಾಸ್ಕರ್ ರೈ, ದಿನೇಶ್ ಅಮೀನ್, ಟಿ.ತಾರನಾಥ ಕೊಟ್ಟಾರಿ, ಪ್ರಸಾದ್‌ಕುಮಾರ್ ಬಿ.ಸಿ.ರೋಡು, ಮಂಜು ವಿಟ್ಲ, ಶಾಲಾ ಮುಖ್ಯಶಿಕ್ಷಕಿ ಗುಣರತ್ನ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ದಾನಿಗಳನ್ನು, ಹಿತೈಷಿಗಳನ್ನು ಶಾಲು ಹಾಕಿ ಗೌರವಿಸಲಾಯಿತು.
ಸಮಾರಂಭದಲ್ಲಿ ದಾನಿಗಳನ್ನು, ಹಿತೈಷಿಗಳನ್ನು ಶಾಲು ಹಾಕಿ ಗೌರವಿಸಲಾಯಿತು.
ತಾಪಂ ಸದಸ್ಯ ಗಣೇಶ್ ಸುವರ್ಣ, ಭೂಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಅರುಣ್ ರೋಶನ್ ಡಿ’ಸೋಜ, ಪ್ರಸಾದ್ ಕುಮಾರ್, ತೇವು ತಾರನಾಥ ಕೊಟ್ಟಾರಿ, ಐತಪ್ಪ ಆಳ್ವ, ಉಮೇಶ್ ಸಾಲ್ಯಾನ್, ರಾಧಾಕೃಷ್ಣ ತಂತ್ರಿ, ಜ್ಯೋತೀಂದ್ರಶೆಟ್ಟಿ ಮುಂಡಾಜೆಗುತ್ತು, ನವೀನ್ ಚಂದ್ರ ಶೆಟ್ಟಿ, ರಮಾನಂದ ಶೆಟ್ಟಿ ಬೆಂಜನಪದವು, ಗೋಪಾಲ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ನವೋದಯ ಮಿತ್ರ ಕಲಾ ವೃಂದದ ಸಂಚಾಲಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ದಾಮೋದರ ನೆತ್ರಕೆರೆ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕಿ ಮೋಹಿನಿ ನಿರೂಪಿಸಿದರು. ಲೋಕೇಶ್ ವಂದಿಸಿದರು.
