ಕುಕ್ಕೇಡಿಯಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆತಾಲೂಕು ಕಾನೂನು ಸೇವೆಗಳ ನಿಮಿತ್ತ ಬೆಳ್ತಂಗಡಿ ಮತ್ತು ವಕೀಲರ ಸಂಘ, ಬೆಳ್ತಂಗಡಿ ಇವರ ಸಂಯುಕ್ತಾಶ್ರಯದಲ್ಲಿ, ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಇವರ ಸಹಯೋಗದೊಂದಿಗೆ ದ.ಕ.ಜಿ.ಪ.ಹಿ.ಪ್ರಾ ಶಾಲೆ ಕುಕ್ಕೇಡಿಯಲ್ಲಿ ನಡೆದರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ವಿಶ್ವಏಡ್ಸ್ ದಿನಾಚರಣೆ’ ಹಾಗೂ ವಿಶ್ವ ವಿಕಲ ಚೇತನರ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿಕಾರ್ಯಕ್ರಮವನ್ನುಆಯೋಜಿಸಲಾಯಿತು.
ಗೌರವಾನ್ವಿತ ಶ್ರೀ ನಾಗೇಶ ಮೂರ್ತಿ ಬಿ.ಕೆ, ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರುತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಇವರುಅಧ್ಯಕ್ಷೀಯ ನೆಲೆಯಲ್ಲಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವ ಹಕ್ಕುಗಳ ಮಹತ್ವ,ವಿಧಗಳ ಉಗಮದ ಬಗ್ಗೆ ಜಾಗೃತಿ ಮೂಡಿಸಿದರು.ಗೌರವಾನ್ವಿತ ಮುಖ್ಯ ಅತಿಥಿಗಳಾದ ಶ್ರೀ.ಸತೀಶ್‍ಕೆ.ಜಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮಾಹಿತಿ ನೀಡಿದರು. ಗೌರವಾನ್ವಿತ ಮುಖ್ಯ ಅತಿಥಿಗಳಾದ ಶ್ರೀ ಕೆ.ಎಂ ಆನಂದ, ಪ್ರಧಾನ ಸಿವಿಲ್ ನ್ಯಾಯಾಧೀಶರುಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಇವರು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಿದರು.ಅತಿಥಿಗಳಾದ ಶ್ರೀ.ಅಲೋಶಿಯಸ್ ಲೋಬೊ, ಅಧ್ಯಕ್ಷರು, ವಕೀಲರ ಸಂಘ ಬೆಳ್ತಂಗಡಿ ಇವರುಯುವಜನತೆ ಮೊಬೈಲ್ ಮತ್ತುಫೇಸ್‍ಬುಕ್ ಬಳಸುವಾಗ ತುಂಬಾಜಾಗರೂಕರಾಗಬೇಕುಇಲ್ಲದೇ ಹೋದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ ಎಂದರು.ಅತಿಥಿಗಳಾದ ಶ್ರೀ.ಕೆ.ಶ್ರೀಕೃಷ್ಣ ಶೆಣೈ, ಪ್ರಧಾನ ಕಾರ್ಯದರ್ಶಿಗಳು, ವಕೀಲರ ಸಂಘ, ಬೆಳ್ತಂಗಡಿ, ಇವರುಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಚೈತ್ರಾ ವೈದ್ಯಾಧಿಕಾರಿಗಳು ಪ್ರಾಥಮಿಕಆರೋಗ್ಯಕೇಂದ್ರ, ಅಳದಂಗಡಿ, ಇವರುಎಚ್.ಐ.ವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದರು. ಡಾ.ಪ್ರತೀತ್ ವೈದ್ಯಾಧಿಕಾರಿಗಳು ಪಡಂಗಡಿಇವರು ವಿಕಲ ಚೇತನರ ಬಗ್ಗೆ ಹಾಗೂ ಎಚ್.ಐ.ವಿ/ಏಡ್ಸ್ ನಿಂದ ಹೇಗೆ ದೂರವಿರಬಹುದುಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರೊ.ರೊನಾಲ್ಡ್ ಪ್ರವೀಣ್‍ಕೊರೆಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸ್ವಾಗತಿಸಿದರು. ಕು.ನವ್ಯಾ ಮತ್ತುತಂಡ ಪ್ರಾರ್ಥಿಸಿದರು, ಕು.ಭವ್ಯ ನಿರೂಪಿಸಿದರು,ಕು.ಕಾವ್ಯ ವಂದಿಸಿದರು.
