|
*ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಜೋಪಡಿಗಳು. ಇಲ್ಲಿವೆ ಶಾಲೆಯಿಂದ ಹೊರಗುಳಿದ 20 ಮಕ್ಕಳು. ಕೈಯಲ್ಲಿ ಬಳಪ ಹಿಡಿಯ ಬೇಕಾದ ಮಕ್ಕಳೆಲ್ಲ ಇಲ್ಲಿ ಬಾಲ ಕಾರ್ಮಿಕರು. ಇವರಿಗೆಲ್ಲ ಬಯಲೇ ಶೌಚಾಲಯ..!! ನಾಗರಿಕ ಸಮಾಜದಲ್ಲಿ ಅಸಹಾಯಕವಾಗಿ ಬದುಕುಸಾಗಿತ್ತಿರುವ ಈ ಕುಟುಂಬಗಳಿಗೆ ಜಿಲ್ಲಾಡಳಿತವು ಪುರ್ನವಸತಿ ಕಲ್ಪಿಸಬೇಕಾದೆ. ಸಂಬಂಧ ಪಟ್ಟ ಇಲಾಖೆಗಳು ಜವಬ್ದಾರಿಯಿಂದ ಸ್ಪಂದಿಸಿಬೇಕಾಗಿದೆ.*
ಉಡುಪಿ; ರಾಷ್ಟ್ರೀಯ ಹೆದ್ದಾರಿ 66 ರ ಶಾರದ ಹೊಟೇಲ್ ಬಳಿ, ಹೊರ ರಾಜ್ಯದ ವಲಸೆ ಕಾರ್ಮಿಕ ಕುಟುಂಬಗಳು ಅಪಾಯದ ಸ್ಥಿತಿಯಲ್ಲಿ ಟರ್ಪಾಲು ಜೋಪಡಿ ಕಟ್ಟಿಕೊಂಡು ನಾಗರಿಕ ಸಮಾಜದಲ್ಲಿ ಅಸಹಾಯಕವಾಗಿ ಬದುಕು ಸಾಗಿಸುತ್ತೀವೆ. ಇಲ್ಲಿರುವ 6 ಕುಟುಂಬಗಳಲ್ಲಿ 30 ಕ್ಕೂ ಅಧಿಕ ಸಣ್ಣ ಮಕ್ಕಳು ಇರುವುದನ್ನು ಗುರುತಿಸಲಾಗಿದೆ. ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತೀರುವುದು, ಆಟ ಆಡುತ್ತಿರುವುದು ಕಂಡು ಬಂದಿದೆ. ಇಲ್ಲಿ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಕಂಡು ಬಂದಿವೆ. ರಾತ್ರಿಯ ಸಮಯದಲ್ಲಿ ಘನ ವಾಹನ ಚಾಲಕರು ನಿದ್ದೆಯ ಮಂಪರಿನಲ್ಲಿ ಹೆಚ್ಚಾಗಿ ಇರುತ್ತಾರೆ. ಚಾಲಕರ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿದಲ್ಲಿ ಜೋಪಡಿಗಳ ಮೇಲೆ ವಾಹನ ಸಂಚರಿಸಿ, ಸಾವು ನೋವು ಸಂಭವಿಸುವ ಸಾಧ್ಯತೆಯು ಇರುತ್ತದೆ. ನಗರಾಡಳಿತ, ಜಿಲ್ಲಾಡಳಿತ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪಕ್ಕ ನೆಲೆಕಂಡಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸ ಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.
______________________________
ಹೆದ್ದಾರಿಯಲ್ಲಿ ನೆಲೆ ಕಂಡಿರುವ ಕುಟುಂಬಗಳು ಶೌಚಾದಿಕ್ರಿಯೆಗಳಿಗೆ ಬಯಲನ್ನು ಆಶ್ರಯಸಿ ಕೊಂಡಿವೆ. ಇಲ್ಲಿ ಮಾರಕ ಕಾಯಿಲೆಗಳ ಹರಡುವ ಸಾಧ್ಯತೆಯು ಇದೆ. ಈ ಕುಟುಂಬಗಳು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತೀರುವುದರಿಂದ ಡೆಂಗ್ಯೊ, ಮಲೇರಿಯಾ ಮುಂತಾದ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯು ಇದೆ. ಈ ಹಿಂದೆಯು ಈ ಸ್ಥಳದಲ್ಲಿ ವಲಸೆ ಕಾರ್ಮಿಕ ಹೊರ ಜಿಲ್ಲೆಯ ಕುಟುಂಬಗಳು ವಾಸಿಸುತ್ತಿದ್ದವು. ಜಿಲ್ಲಾಡಳಿತ ನೀಡಿದ ಆದೇಶದ ಮೆರೆಗೆ ಮಕ್ಕಳ ರಕ್ಷಣಾ ಘಟಕವು ಎರಡು ಕುಟುಂಬವನ್ನು ಸ್ಥಳಾಂತಿರಿಸಿತ್ತು. ಮತ್ತೊಂದು ಕುಟುಂಬವನ್ನು ನಾಗರಿಕ ಸಮಿತಿಯ ನೆರವಿನ ಮೂಲಕ ಅವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಿತ್ತು. ಅದೇ ಸ್ಥಳದಲ್ಲಿ ಇವಾಗ ಹೊರರಾಜ್ಯದ ವಲಸೆ ಕುಟುಂಬಗಳು ನೆಲೆ ಕಂಡಿವೆ. ಸ್ಥಳವು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಕ್ರಮವಾಗಿ ನೆಲೆಸಲು ಅವಕಾಶ ನೀಡಬಾರದು. ಫಲಕ ಅಳವಡಿಸ ಬೇಕು. ಆರೋಗ್ಯ ಇಲಾಖೆಯ ಗಮನಿಸ ಬೇಕಾಗಿದೆ.
*ನಿತ್ಯಾನಂದ ಒಳಕಾಡು*
ಸಮಾಜಸೇವಕ
______________________________
ವಲೆಸಿಗರು ರಾಜಸ್ಥಾನ ರಾಜ್ಯದ ಜೈಪುರ ಜೆಲ್ಲೆಯವರೆಂದು ತಿಳಿದು ಬಂದಿದೆ. ಶಾಲೆಗೆ ಹೋಗ ಬೇಕಾದ 6 ವರ್ಷದಿಂದ 12 ವರ್ಷದವರಿಗಿನ 20 ಮಕ್ಕಳು ಇಲ್ಲಿದ್ದಾರೆ. ಎಲ್ಲ ಮಕ್ಕಳು ಶಾಲೆಯ ಮೆಟ್ಟಿಲು ಹತ್ತದೆ, ಶಾಲೆಯಿಂದ ಹೊರಗುಳಿದ ಮಕ್ಕಳಾಗಿದ್ದಾರೆ. ಮಕ್ಕಳ ಹೆತ್ತವರು ಸಂಗೀತ ವಾದನಗಳ ತಯಾರಿಸಿ ಮಾರಟ ಮಾಡುವರಾಗಿದ್ದಾರೆ. ಮಕ್ಕಳು ಸಂಗೀತ ಪರಿಕರಗಳ ತಯಾರಿಕೆಗೆ ಹೆತ್ತವರಿಗೆ ಸಹಕರಿಸುದಲ್ಲದೆ, ಮಾರಟ ಕಾರ್ಯದಲ್ಲೂ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಕ್ಕಳನ್ನು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ರಕ್ಷಿಸಿ ಬಾಲಕಿಯರ ಬಾಲ ಮಂದಿರ, ಹಾಗೂ ಶಿಕ್ಷಣ ವ್ಯವಸ್ಥೆ ಇರುವ ಪುರ್ನವಸತಿ ಕೇಂದ್ರಗಳಲ್ಲಿ ನೆಲೆ ಕಲ್ಪಿಸಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾಗಿದೆ. ಮಕ್ಕಳು ರಸ್ತೆಯಲ್ಲಿ ಅರೆ ಬೆತ್ತಲಾಗಿ ತಿರುಗಾಡುದನ್ನು ಗಮನಿಸಿ ನಾಗರಿಕ ಸಮಿತಿಯ ಮೂಲಕ ಬಟ್ಟೆಯನ್ನು ಮಕ್ಕಳಿಗೆ ವಿತರಿಸಿದ್ದೇವೆ.
*ತಾರಾನಾಥ್ ಮೇಸ್ತ ಶಿರೂರು*
ಸಮಾಜಸೇವಕ
|



