ವಿಟ್ಲ: ಶೋಕಮಾತೆಯ ದೇವಾಲಯದಲ್ಲಿ ಮೋಂತಿ ಫೆಸ್ತ್ ಹಬ್ಬದ ಸಂಭ್ರಮದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದು ಬಂದಂತೆ ದೇವಾಲಯದ ಕುಟುಂಬದ ಹತ್ತನೇ, ಪಿಯುಸಿ ಮತ್ತು ಪದವಿ ಮತ್ತು ಸ್ನಾತಕೋತ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2019 ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಇಗರ್ಜಿಯ ಮುಖ್ಯ ಧರ್ಮಗುರು ಫಾ| ಎರಿಕ್ ಕ್ರಾಸ್ತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಫಾ| ಜೊಸ್ಸಿ ಮಸ್ಕರೇನಸ್ ಮತ್ತು ಫಾ| ಜಾನ್ ಪಾೈಸ್ ಭಾಗವಹಿಸಿದ್ದರು. ಸಿಸ್ಟರ್ ಮರಿನಾ , ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್ ಮತ್ತು ಕಾರ್ಯದರ್ಶಿ ವಲೇರಿಯನ್ ಮಾಡ್ತಾ ಉಪಸ್ಥಿತರಿದ್ದರು. ಐಸಿವೈಎಂ ಘಟಕಾಧ್ಯಕ್ಷ ಡಿಲ್ಟನ್ ಮಸ್ಕರೇನಸ್ ಕಾರ್ಯಕ್ರಮ ಸಂಯೋಜಿಸಿದರು.
