ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ವರದರಾಜ್ ದಂಪತಿ ಸಮೇತ ಬಂದು ಶ್ರೀ ದೇವಿಯ ದರ್ಶನ ಪಡೆದು ಗಾಯತ್ರಿ ಪೂಜೆ ನೆರವೇರಿಸಿದರು. ಬೆಂಗಳೂರು ರಾಮನಗರ ಕ್ಷೇತ್ರದ ಭಾರತೀಯ ಜನತಾಪಾರ್ಟಿಯ ಯುವಮೋರ್ಛಾ ಜಿಲ್ಲಾಧ್ಯಕ್ಷ ವರಧರಾಜ್ ಅವರು ಪೊಳಲಿ ದೇವಿಯ ಬ್ರಹ್ಮಕಲಶೋತ್ಸವದ ಆಗಮಿಸದ ಸಂದರ್ಭ ಅವರು ದೇವಿಯಲ್ಲಿ ಪ್ರಾರ್ಥಿಸಿದ ಹರಕೆಯನ್ನು ನೀಡಲು ಪೊಳಲಿ ಶ್ರೀ ರಾಜರಾಜೇಶ್ವರೀ ಧೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಮಂಗಳವಾರ ಬಂದು ಪೂಜೆ ನೆರವೇರಿಸಿದರು. ದೇವಳದ ಅನುವಂಶಿಕ ಮೊಕ್ತೇಸರ ಪ್ರ.ಅರ್ಚಕ ಪಿ.ಮಾಧವ ಭಟ್ , ದೇವಳದ ತಂತ್ರಿ ಡಾ. ವೆಂಕಟೇಶ್ ಪೂಜಾವಿಧಿವಿದಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.
