ಗುರುಪುರ : `ದಾಯೆ ಬದ್ಕೆರಾಪುಜಿ’ ಮತ್ತು `ನಂಬೆರಲತ್ತ್ ಬುಡ್ರೆಲತ್ತ್’ ಯಶಸ್ವಿ ನಾಟಕ ಪ್ರದರ್ಶಿಸಿರುವ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇವರ ಮೂರನೇ ನೂತನ ನಾಟಕ `ಮೆಲ್ಲ ಪಾತೆರ್ಲೆ’ ಆ. 24ರಂದು ಶ್ರೀಕೃಷ್ಣಾಷ್ಟಮಿ ಮೊಸರು ಕುಡಿಕೆ ನಿಮಿತ್ತ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನ ಬಾಳಿಕೆಯಲ್ಲಿ ಪ್ರಥಮ ಪ್ರಯೋಗ ಕಾಣಲಿದೆ.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಾದ, ಲ. ಕಿಶೋರ್ ಡಿ. ಶೆಟ್ಟಿ, ನವೀನ್ ಅಳಕೆ ಮಾರ್ಗದರ್ಶನ ಹಾಗೂ ಶೋಭಾ ಶೆಟ್ಟಿ ಶಕ್ತಿನಗರ, ದಿನೇಶ್ ಅತ್ತಾವರ ಸಲಹೆಯೊಂದಿಗೆ ತಂಡದ ಸಾರಥ್ಯ ಹೊಂದಿರುವ ಪ್ರಶಾಂತ್ ಗುರುಪುರ ನಾಟಕ ರಚಿಸಿದರೆ, ಪಚ್ಚು ಕೈಕಂಬ ನಿರ್ದೇಶಿಸಿದ್ದಾರೆ. ಶ್ರೀಕಾಂತ್ ಗುರುಪುರ ಸಾಹಿತ್ಯ ಹಾಗೂ ಪ್ರಶಾಂತ್ ಬೇಡಗುಡ್ಡೆ ಸಂಗೀತ ನೀಡಿದ್ದಾರೆ.
