ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನಕ್ಕೆ ಅ. 21ರಂದು ಶಿರ್ತಾಡಿಯಿಂದ ಧ್ವಜಸ್ತಂಭ(ಕೊಡಿಮರ) ಮರ ತರಲಾಗುವುದು. ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯಿಂದ ಗುರುಪುರದವರೆಗೆ ಭವ್ಯ ಮೆರವಣಿಗೆಯಲ್ಲಿ ಕೊಡಿಮರ ತರುವುದಾಗಿ ಅ. 19ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ. ರವಿರಾಜ ಶೆಟ್ಟಿ, ಕಿಟ್ಟಣ್ಣ ರೈ, ಪುರಂದರ ಮಲ್ಲಿ, ಪುರುಷೋತ್ತಮ ಮಲ್ಲಿ, ನರಸಿಂಹ ಪೂಜಾರಿ, ಪ್ರೇಮನಾಥ ಮಾರ್ಲ, ಸೇಸಮ್ಮ ಪೂಜಾರಿ, ನಿತೀನ್ ಕೋಟ್ಯಾನ್, ಸತೀಶ್ ಕಾವ, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಸುಬ್ಬಯ್ಯ ಶೆಟ್ಟಿ, ನಳಿನಾಕ್ಷಿ ಶೆಟ್ಟಿ, ದೇವದಾಸ ಅಂಚನ್, ವಿಲಾಸ ಶೆಟ್ಟಿ, ರೋಹಿತಾಶ್ವ ಶೆಟ್ಟಿ, ರವಿ ಶೆಟ್ಟಿ, ತನಿಯಪ್ಪ ಪೂಜಾರಿ, ಪದ್ಮನಾಭ ಶೆಟ್ಟಿ, ಸುಕುಮಾರ ಶೆಟ್ಟಿ ಹಾಗೂ ಊರವರು ಪಾಲ್ಗೊಂಡಿದ್ದರು. ಯಶವಂತ ಕೋಟ್ಯಾನ್ ವಂದಿಸಿದರು.
ಚಿತ್ರ20ವಿಪಿಕೊಡಿಮರಸಭೆ
