ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಂಗಳೂರು(ಗ್ರಾ), ಸ್ತ್ರೀ ಶಕ್ತಿ ಗೊಂಚಲುಗಳು ಗಂಜಿಮಠ ವಲಯ, ಗ್ರಾಮ ಪಂಚಾಯತ್ ಗಂಜಿಮಠ ಇದರ ಸಂಯುಕ್ತ ಆಶ್ರಯದಲ್ಲಿ ಪೌಷ್ಠಿಕ ಆಹಾರ ಸಪ್ತಾಹ `ಬೇಟಿ ಬಚಾವೋ-ಬೇಟಿ ಪಡಾವೋ’ ಕಾರ್ಯಕ್ರಮವು ಗಂಜಿಮಠ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.19vpbetibhachavo
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ. ಇಬ್ರಾಹಿಂ ಅವರು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಗುವಿಗೂ ಉನ್ನತ ಸ್ಥಾನವಿದ್ದು, ಅವರಿಗೆ ಸೂಕ್ತ ಶಿಕ್ಷಣ ನೀಡಿದಾಗ ಗಂಡುಮಕ್ಕಳಿಗಿಂತಲೂ ಮೇಲ್ಮಟ್ಟದ ಸಾಧನೆಯನ್ನು ಮಾಡಬಹುದು, ಮನೆಯಲ್ಲೇ ಬೆಳೆಯುವ ಹಣ್ಣು, ತರಕಾರಿ, ಮಗುವಿಗೆ ಎದೆಹಾಲು ನೀಡುವುದರಿಂದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಂಚಾಯತ್ ಸದಸ್ಯರಾದ ಸುನಿಲ್ ಜಿ. ಅವರು ಮಾತನಾಡಿ, ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಧಾನ ಎಂದರು. ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅಮಿತ್‍ರಾಜ್ ಅವರು ಸಮತೋಲಿತ ಆಹಾರ, ಎದೆಹಾಲಿನ ಮಹತ್ವ ಬಗ್ಗೆ ತಿಳಿಸಿ, ಪ್ರಸವ ಪೂರ್ವ ಲಿಂಗ ಪತ್ತೆ, ಭ್ರೂಣ ಹತ್ಯೆ ಸರಿಯಲ್ಲ ಎಂದು ತಿಳಿಸಿದರು. ಹಿರಿಯ ಮೇಲ್ವಿಚಾರಕಿಯಾದ ಉಷಾ ಡಿ. ಅವರು ಬೇಟಿ ಬಚಾವೋ ಬೇಟಿ ಪಡಾವೋ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಗಂಜಿಮಠ ಪಂಚಾಯತ್‍ನ ಅಧ್ಯಕ್ಷರಾದ ಮಾಲತಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಝಾಕಿರ್ ಸೇರಿ ಹಲವರು ಉಪಸ್ಥಿತರಿದ್ದರು. ಪಿಡಿಓ ಜಗದೀಶ್ ಅವರು ಮಹಿಳಾ ಗ್ರಾಮ ಸಭೆಯನ್ನು ನಿರ್ವಹಿಸಿದರು. ಚಂಚಲಾಕ್ಷಿ ನಿರೂಪಿಸಿ, ಲತಾ ಧನ್ಯವಾದ ಅರ್ಪಿಸಿದರು. ಅಂಗನವಾಡಿ ಮಕ್ಕಳು ನಾಡಗೀತೆಯನ್ನು ಹಾಡಿದರು.

By Suddi9

Leave a Reply

Your email address will not be published. Required fields are marked *