ಕೈಕಂಬ: ಕಾಲಭೈರವೇಶ್ವರ ಮಂಜುನಾಥ ದೇವಸ್ಥಾನ ಮಳಲಿ ಮಟ್ಟಿ ಇಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ಹಾಗೂ ಡಾ. ವೈ. ಭರತ್ ಶೆಟ್ಟಿಯವರ ಪ್ರಯುಕ್ತ ಊರವರ ವತಿಯಂದ ಶತಸೀಯಾಳಾಭಿಷೇಕ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಉಮೇಶ್‍ನಾಥ್ ಕದ್ರಿ, ಸಮಿತಿಯ ಗಂಗಾಧರ ಜೋಗಿ, ವಿಶ್ವನಾಥ ಪೂಜಾರಿ, ದಿನೇಶ್ ಶೆಟ್ಟಿ, ಹರೀಶ್ ಮಟ್ಟಿ, ಹರೀಶ್ಚಂದ್ರ ಪೂಜಾರಿ, ಬಿಜೆಪಿ ಮುಖಂಡರಾದ ಶೋಹನ್ ಅಥಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ನೋಣಯ್ಯ ಕೋಟ್ಯಾನ್, ಥೋಮಸ್ ಸಿಕ್ವೇರಾ, ಹಿಂದೂ ಜಾಗರಣವೇದಿಕೆಯ ಮುಖಂಡರಾದ ವಸಂತ ಪೂಜಾರಿ, ಪುಷ್ಪರಾಜ್ ಜೋಗಿ, ರಾಜ ಕೋಟ್ಯಾನ್ ಕಿನ್ನಿಅರ್ಬಿ, ಅಶೋಕ್ ಮಟ್ಟಿ, ರೋಹಿತ್ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
