ವಿಟ್ಲ: ಬುದ್ಧಿಯ ಬೆಳವಣಿಗೆಗೆ ನಮ್ಮ ಜ್ಞಾನದ ವಿಕಾಸವಾಗಬೇಕು. ವ್ಯಕ್ತಿಗಳನ್ನು ತಪ್ಪಾಗಿ ತಿಳಿಯುವ ಮೊದಲು ನಮ್ಮನ್ನು ನಾವು ಅರಿತಿರಬೇಕು ಹಾಗೂ ನಮ್ಮ ಜ್ಞಾನದ ಅಭಿವೃದ್ಧಿಗೆ ನಮ್ಮ ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸುವುದರೊಂದಿಗೆ ನಮ್ಮ ಗುರಿ ತಲುಪಬೇಕೆಂದು ವಿಠಲ ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಯು.ಎಸ್. ವಿಶ್ವೇಶ್ವರ ಭಟ್ ಹೇಳಿದರು.

???????????????????????????????
ಅವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದ ಮೂರನೇ ವಾರದ ಬುದ್ದಿಯ ಬೆಳವಣಿಗೆ ಎಂಬ ವಿಷಯದ ಕುರಿತು ಮಕ್ಕಳಿಗೆ ಚಟುವಟಿಕೆಗಳನ್ನು ನಡೆಸಿದರು.

???????????????????????????????
ವೇದಿಕೆಯಲ್ಲಿ ಉಪನ್ಯಾಸಕ ಅಣ್ಣಪ್ಪ ಸಾಸ್ತನ, ಉಪನ್ಯಾಸಕಿ ಜಲಜಾಕ್ಷಿ , ಉಪನ್ಯಾಸಕಿ ಜ್ಯೋತಿ ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಕಾಂತ್ ವಂದಿಸಿ, ವಿದ್ಯಾರ್ಥಿ ಪಾರ್ಥೇಶ್ ಸ್ವಾಗತಿಸಿ, ಜ್ಯೋತಿ ಹೆಗ್ಡೆ ವರದಿ ವಾಚಿಸಿ, ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *