Modi11-300x225

ವಾರಾಣಸಿ (ಉತ್ತರ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಾರಾಣಸಿಗೆ ಆಗಮಿಸಿದ್ದು, ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ  ಇಮ್ಯಾನುಯೆಲ್ ಮೈಕ್ರಾನ್ ಅವರನ್ನೂ ಮೋದಿ ವಾರಾಣಸಿಯಲ್ಲಿ ಬರಮಾಡಿಕೊಂಡರು.
ಮಿರ್ಜಾಪುರದಲ್ಲಿ ಸೌರಶಕ್ತಿ ಘಟಕ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರೂ ನಾಯಕರು  ಪಾಲ್ಗೊಳ್ಳಲಿದ್ದಾರೆ.
ನಂತರ ವಾರಾಣಸಿಯಲ್ಲಿ ದೀನದಯಾಳ ಹಸ್ತಕಲಾ ಸಂಕುಲಕ್ಕೆ ಭೇಟಿ ಕೊಟ್ಟು ಅಲ್ಲಿನ ಕಲಾವಿದರೊಂದಿಗೆ ಸಂವಾದ ನಡೆಸುವರು.
ವಾರಾಣಸಿಯ ಪ್ರಸಿದ್ಧ  ಅಸ್ಸಿ ಘಾಟ್ ನಲ್ಲಿ ಗಂಗಾ ಘಟ್ಟದಲ್ಲಿ ದೋಣಿಯಾನದ ನಂತರ ಪ್ರಧಾನಿ ಮೋದಿ ಮೈಕ್ರಾನ್ ಅವರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳುವರು.
ನಂತರ ಮಧ್ಯಾಹ್ನ  ಮಧುದಿಹ್ ಹಾಗೂ ಪಾಟ್ನಾ ನಡುವೆ ಸಂಚರಿಸುವ ಹೊಸ ರೈಲಿಗೆ ಮೋದಿ ಚಾಲನೆ ನೀಡುವರಲ್ಲದೇ ಡಿಎಲ್ಡಬ್ಲ ಮೈದಾನದಲ್ಲಿ ವಿವಿಧ    ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವರು.

By Suddi9

Leave a Reply

Your email address will not be published. Required fields are marked *