ಬಂಟ್ವಾಳ:ದೇಶದ ಸಂಸತ್ತು ಮತ್ತು ವಿಧಾನಸಭೆಗೆ ಮೀಸಲಾದ ‘ರಾಜಕೀಯ’ ಇಂದು ಧಾರ್ಮಿಕ ಕ್ಷೇತ್ರಗಳಿಗೂ ಪ್ರವೇಶಿಸಿರುವುದು ವಿಷಾಧನೀಯ. ಭಜನಾ ಸಂಕೀರ್ತನೆ ನಡೆಸಲು ಅಡ್ಡಿಪಡಿಸುವ ಬದಲಾಗಿ ಭಜನಾ ಮಂಡಳಿಗಳಿಗೆ ತಾಳ, ಮೈಕ್ ಮತ್ತಿತರ ಸಾಮಾಗ್ರಿ ಒದಗಿಸಬೇಕಾದ ಮಹತ್ತರ ಜವಾಬ್ದಾರಿ ಧಾರ್ಮಿಕ ದತ್ತಿ ಇಲಾಖೆ ಮರೆತಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆರೋಪಿಸಿದ್ದಾರೆ.11btl-Bhajane

ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮತ್ತು ರಜತ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಅಖಂಡ ಭಜನಾ ಸಪ್ತಾಹ ಮತ್ತು ರುದ್ರಯಾಗ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವಳದ ನಿಕಟಪೂರ್ವ ಆಡಳಿತ ಮೊಕ್ತೇಸರ ಎಂ.ರಮೇಶ ಭಟ್ ಮಾದೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಓಟಿಗಾಗಿ ವಿಭಜನೆ ನೀತಿ: ಡಾ.ಭಟ್

ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಕೇವಲ ಓಟಿನ ಆಸೆಗಾಗಿ ‘ವೇದಭೂಮಿ’ ಆಗಿದ್ದ ಅಖಂಡ ಭಾರತವನ್ನು ತ್ರಿಖಂಡಗೊಳಿಸಿದ ರಾಜಕಾರಣಿಗಳು ಕಳೆದ 70 ವರ್ಷಗಳಿಂದ ವಿಶ್ವಕ್ಕೆ ಮಾರಕವಾದ ಭಯೋತ್ಪಾದನೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಮಸೀದಿ ಮತ್ತು ಚಚರ್ಿನ ಖಾಸಗಿ ಆಡಳಿತಕ್ಕೆ ಅವಕಾಶ ನೀಡುವ ಸರ್ಕಾರವು ಕೇವಲ ಮಠ, ಮಂದಿರ, ದೇವಸ್ಥಾನಗಳನ್ನು ಕೈವಶ ಮಾಡಿಕೊಂಡು ಸಂಘಟನೆಗಳನ್ನು ಮಣಿಸಲು ಹೊರಟಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಹಿಂದೂಗಳ ಧಾಮರ್ಿಕ ಮೆರವಣಿಗೆಗೆ ಅಡ್ಡಿಪಡಿಸುವ ಮುಸ್ಲಿಂ ಗೂಂಡಾಗಿರಿಗೆ ‘ಕೋಮು ಗಲಭೆ’ ಎನ್ನುವ ರಾಜಕಾರಣಿಗಳು ಕಳೆದ ನಾಲ್ಕು ವರ್ಷಗಳಲ್ಲಿ 24 ಮಂದಿ ಹಿಂದೂ ಯುವಕರು ಹತ್ಯೆಯಾದಾಗ ಮೌನ ವಹಿಸಿ, ಮುಗ್ಧ ಖೈದಿಗಳು ಎಂಬ ನೆಪದಲ್ಲಿ ಮುಸ್ಲಿಮರನ್ನು ಜೈಲಿನಿಂದ ಬಿಡುಗಡೆಗೊಳಿಸುತ್ತಿದೆ ಎಂದು ಟೀಕಿಸಿದರು.

ಪ್ರಕೃತಿ ಆರಾದನೆ, ಆಧ್ಯಾತ್ಮಿಕತೆ ಮತ್ತು ದೈವಿಕ ಶಕ್ತಿ ಮೂಲಕ ವಿಶ್ವಕ್ಕೆ ಒಳಿತು ಬಯಸುವ ಹಿಂದೂ ಧರ್ಮದ ಬಗ್ಗೆ ಜನ ಜಾಗೃತಿ ಮೂಡಿಸಿದರೆ ನನ್ನನ್ನು ‘ಕೋಮುವಾದಿ’ ಎನ್ನುತ್ತಾರೆ. ಪ್ರತಿನಿತ್ಯ ನಡೆಯುವ ಗೋಹತ್ಯೆ, ಜಾನುವಾರು ಕಳವು, ಮತಾಂತರ, ಲವ್ ಜಿಹಾದ್ ತಡೆದರೆ ‘ನೈತಿಕ ಪೊಲೀಸ್ಗಿರಿ’ ಎನ್ನುತ್ತಾ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಇದಕ್ಕಾಗಿ ‘ತಾಳ ಹಿಡಿಯುವ ಕೈ ತಲವಾರು ಹಿಡಿಯುವುದಕ್ಕೂ ಸಿದ್ಧರಾಗಬೇಕು’ ಎಂದು ಅವರು ಎಚ್ಚರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುನಿತಾ ನಾಯಕ್, ಭಜನಾ ಮಂಡಳಿ ಅಧ್ಯಕ್ಷ ದಿನೇಶ ಭಟ್ ದೈಲ, ಭಜನಾ ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ, ಅರ್ಚಕ ರಾಮಚಂದ್ರ ಭಟ್ ಮತ್ತಿತರರು ಇದ್ದರು.
ಇದೇ ವೇಳೆ ಭಜನಾ ಮಂಡಳಿ ಸಂಚಾಲಕ ಸದಾನಂದ ಗೌಡ ಮತ್ತಾವು ಸಹಿತ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಿತ್ ಶಿವನಗರ ಸ್ವಾಗತಿಸಿ, ಆಶಿಕ್ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *