ಜ್ಯೋತಿಗುಡ್ಡೆ : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜ್ಯೋತಿಗುಡ್ಡೆಯ ವಾರ್ಷಿಕ ಜಾತ್ರೆಯು ಇದೇ ಫೆ 27ರಿಂದ ಮಾರ್ಚ್ 01ರತನಕ ನಡೆಯಲಿದೆ. ಜ್ಯೋತಿಗುಡ್ಡೆ ಜಾತ್ರೆಯ ಮೊದಲ ದಿನ ಬೆಳಿಗ್ಗೆ ಘಂಟೆ 8.00 ರಿಂದ ಬ್ರಹ್ಮಶ್ರೀ ಕುಡುಪು ಶ್ರೀ ನರಸಿಂಹ ತಂತ್ರಿಗಳ ವೈದಿಕ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡು ತೋರಣ ಮುಹೂರ್ತ, ಗಣಹೋಮ, ನವಕ ಕಲಶ, ಮಹಾಪೂಜೆ, ಮೊದಲಾದ ಪೂಜಾದಿ ಕಾರ್ಯಗಳ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ. ರಾತ್ರಿ ಗಂಟೆ 8.30ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವೀ ಮಹಾತ್ಮೆ ಎಂಬ ಯಕ್ಷಗಾನ ನಡೆಯಲಿದೆ.

ಫೆಬ್ರವರಿ  28ರಂದು ರಾತ್ರಿ ಧಾರ್ಮಿಕ ಸಭೆಯು ನಡೆಯಲಿದ್ದು, ಅದರಲ್ಲಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಫಜೀರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಭರತ್ ರಾಜ್ ಶೆಟ್ಟಿ ಫಜೀರುಗುತ್ತು. ಮಂಗಳೂರು ಎಸ್ ಕೆ ಬಿಲ್ಡರ್ಸ್‍ನ ಸಂತೋಷ್ ಕೊಟ್ಟಿಂಜ ತುಂಬೆ, ಜಿತೇಂದ್ರ ಕೊಟ್ಟಾರಿ, ತಾಲೂಕು ಪಂಚಾಯತ್‍ನ ಸಂಜೀವ ಪೂಜಾರಿ, ಗ್ರಾಮ ಪಂಚಾಯತ್‍ನ ಮಹಮದ್ ವಳವೂರು ಮತ್ತು ಮಧುಸೂದನ್ ಶೆಣೈ, ಮಂಗಳೂರಿನ ಶ್ರೀಮತಿ ಸುರೇಖಾ ಸಾಲಿಯಾನ್ ಪಂಪ್‍ವೆಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ವೈವಿಧ್ಯ. ನೃತ್ಯಾಂಜಲಿ ಭರತನಾಟ್ಯ ಕೇಂದ್ರದ ಕಲಾವಿದರಿಂದ ಭರತನಾಟ್ಯ, ಶಾರದಾ ಕಲಾ ಆಟ್ರ್ಸ್ ಮಂಜೇಶ್ವರದವರಿಂದ ಅಣ್ಣೆ ಬರ್ಪೆಗೆ ಎಂಬ ನಾಟಕ ನಡೆಯಲಿದೆ.

ಜ್ಯೋತಿಗುಡ್ಡೆ ಜಾತ್ರೆಯ ಮೂರನೆ ದಿನ ಮಾರ್ಚ್ 01ರಂದು ತರಿಕಿಟ ಕಲಾ ಕಮ್ಮಟ (ರಿ) ಜ್ಯೋತಿಗುಡ್ಡೆ ಯಕ್ಷಗಾನ ಮಂಡಳಿ ಇವರಿಂದ ಹರಿಮಾಯೆ ಯಕ್ಷಗಾನ ನಡೆಯಲಿದೆ. ಬಳಿಕ ರಾತ್ರ್ರಿ 10.00 ಘಂಟೆಯಿಂದ ಅಣ್ಣಪ್ಪ ಸ್ವಾಮಿ ದೈವಕ್ಕೆ ನೇಮ ಸೇವೆ ನಡೆಯಲಿದೆ.ಎಂದು ಪ್ರಕಟನೆ ತಿಳಿಸಿದೆ.

 

 

By Suddi9

Leave a Reply

Your email address will not be published. Required fields are marked *