ಬಂಟ್ವಾಳ: ಪಂಚಾಯತ್‍ರಾಜ್ ಇಲಾಖೆಯ ಗ್ರಾಮೀಣ ಆಯುಕ್ತಾಲಯದ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ಅವರು ನರಿಕೊಂಬು ಗ್ರಾಮ ಪಂಚಾಯತ್ ಗೆ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಯೋಜನೆ ಅಂಗವಾಗಿ ಭೇಟಿ ನೀಡಿದರು.ಈ ಸಂದರ್ಭ  ಕಾಮಗಾರಿಗಳನ್ನು ಪರಿಶೀಲಸಿದ ಅವರು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪಂಚಾಯತ್ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖ ಉದ್ಯೋಗ ಖಾತರಿ ಯೋಜನೆಗಳ ವಿಚಾರವಾಗಿ ಸಂವಾದ ನಡೆಸಿದರು.

15bhnarikombu

ಲ್ಲೆಯ ಮುಖ್ಯ ಬೆಳೆಗಳಾದ ಭತ್ತ, ತೆಂಗು ಮತ್ತು ಬಾಳೆ ಕೃಷಿಗಳ ಬಗ್ಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನ ಪಾವತಿಗೆ ಅವಕಾಶ ಕಲ್ಪಿಸುವಂತೆ ಮತ್ತು ಶಾಲೆ ಅಂಗನವಾಡಿಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಾಲಾಕ್ಷಿ ಕೆ. ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಗ್ರಾ.ಪಂ.ಉಪಾಧ್ಯಕ್ಷೆ ರಾಜೀವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್, ವಯಸ್ಕ ಶಿಕ್ಷಣಾಧಿಕಾರಿ ಕೆ.ಸುಧಾಕರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂಡಾ, ಸಹಾಯಕ ನಿರ್ದೆಶಕರಾದ ದಯಾವತಿ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶಿವಾನಂದ ಪೂಜಾರಿ, ನಿಕಟ ಪೂರ್ವ ಪಂ.ಅಭಿವೃಧ್ಧಿ ಅಧಿಕಾರಿ ಗಿರಿಜಾ, ಪಂಚಾಯತ್ ಸದಸ್ಯರುಗಳಾದ ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ರವೀಂದ್ರ ಸಪಲ್ಯ, ಉದಯ ಶಾಂತಿಲ, ವಿಶ್ವನಾಥ ಪೂಜಾರಿ, ಮಾಧವ ಕರ್ಬೆಟ್ಟು, ಜಯರಾಜ್ ಶಂಭೂರು, ರಂಜೀತ್ ಕೆದ್ದೇಲ್, ಶ್ರೀ ವಸಂತ ಭೀಮಗದ್ದೆ, ದೇವದಾಸ ನಾಯಿಲ, ನವೀನ ಕುರ್ಚಿಪಲ್ಲ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *