ಬಂಟ್ವಾಳ: ಕೆಲ ದಿನಗಳ ಹಿಂದೆ ಮೆಲ್ಕಾರ್ ನಲ್ಲಿ ದುಷ್ಕರ್ಮಿಗಳ ತಲವಾರು ದಾಳಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಾಗದ ಮೆಲ್ಕಾರ್ ನಿವಾಸಿ ಪವನ್ ಅವರ ಮನೆಗೆ  ಕೇಂದ್ರ ಸಚಿವ ಡಿ. ವಿ .ಸದಾನಂದ ಗೌಡ ಅವರು ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.ಮೇ.೨೬ ರಂದು ರಾತ್ರಿ ಮೆಲ್ಕಾರ್ ನಿವಾಸಿ ಮಾಜಿ ಕೌನ್ಸಿಲರ್ ದಾಮೋದರ ಅವರ ಪುತ್ರ ಪವನ್ ಅವರು ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು.  FB_IMG_1500126033776

ದುಷ್ಕರ್ಮಿಗಳ ದಾಳಿಯಿಂದ ಗಂಭೀರಗಾಯ ಗೊಂಡು ಸದ್ಯ ಪ್ರಾಣಾಪಾಯದಿಂದ ಪಾರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪವನ್ ಅವರನ್ನು  ಕೇಂದ್ರ ಸಚಿವ ಡಿವಿಎಸ್ ಅವರು ಭೇಟಿಯಾಗಿ ದಾಳಿಯ ಬಗ್ಗೆ ಮಾಹಿತಿ ಪಡೆದರು.ಈಸಂದರ್ಭ ಪವನ್ ಅವರ ತಂದೆ ದಾಮೋದರ ಅವರು ಉಪಸ್ಥಿತರಿದ್ದು, ಸಚಿವರಿಗೆ ಪೂರಕ ಮಾಹಿತಿ ನೀಡಿದರು.ಪವನ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೂ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆದಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು,ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಿಲ್ಲೆಯ ಪ್ರಭಾರಿ ಉದಯಕುಮಾರ್ ಶೆಟ್ಟಿ, ಮುಖಂಡರಾದ ದೇವದಾಸ ಶೆಟ್ಟಿ,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ಕ್ರಷ್ಣಪ್ಪ ಪೂಜಾರಿ ಕಲ್ಲಡ್ಕ,ದಿನೇಶ್ ಅಮ್ಟೂರು,ಸಂತೋಷಕುಮಾರ್ ಬೋಳಿಯಾರು,ರಮಾನಾಥ ರಾಯಿ,ಸೀತಾರಾಮ ಪೂಜಾರಿ,ಗಣೇಶ್ ರೈಮಾಣಿ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *