ಬಂಟ್ವಾಳ: ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯ ಸ್ಪೋಟಕ ಮಾಹಿತಿ ತನ್ನಲ್ಲಿರುವುದಾಗಿ ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗೆ ಇಂದು (ಜು.೧೭) ಬಂಟ್ವಾಳ ಪೊಲೀಸ್ ನಗರ ಠಾಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಂಡಿದೆ. ತಮ್ಮ ಹೇಳಿಕೆಗೆ ಸಂಬಂಧಿಸಿ ಠಾಣೆಗಾಗಮಿಸಿ ಮಾಹಿತಿ ನೀಡುವಂತೆ ಶ್ರೀಗಳಿಗೆ ನೊಟೀಸ್ ನಲ್ಲಿ ಸೂಚಿಸಲಾಗಿದೆ.
ಶ್ರೀಗಳು ಶುಕ್ರವಾರ ಸುದ್ದಿಗೋಷ್ಠಿ ಕರೆದು ಶರತ್ ಮಡಿವಾಳ ಕೊಲೆಗೆ ಸಂಬಂಧಿಸಿ ತನ್ನಲ್ಲಿ ಸ್ಪೋಟಕ ಮಾಹಿತಿ ಇದೆ .ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ಒಪ್ಪಿಸಿದರೆ ಬಹಿರಂಗಪಡಿಸುವುದಾಗಿ ತಿಳಿಸಿದ್ದರು.ಬಂಟ್ವಾಳ ವ್ರತ್ತ ನಿರೀಕ್ಷಕರ ಕಚೇರಿಂದ ಶ್ರೀಗಳಿಗೆನೊಟೀಸ್ ಜಾರಿಯಾಗಿದೆ
