ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸ್ವಯಂಸೇವಕ ಶರತ್ ಮಡಿವಾಳರ ಮನೆಗೆ ಕಾರ್ಕಳದ ಶಾಸಕ ಹಾಗೂ ವಿಧಾನಸಭೆಯ ಪ್ರತಿಪಕ್ಷದ ಮುಖ್ಯಸಚೇತಕ ಸುನಿಲ್ ಕುಮಾರ್ ಭೇಟಿ ನೀಡಿ ಮೃತರಕುಟುಂಬಕ್ಕೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ಒಂದು ಲಕ್ಷರೂ ನೆರವನ್ನು ನೀಡಿದರು. ಶರತ್‍ ಸಾವು ನಮಗೆ ತೀವ್ರಆಘಾತವನ್ನುತಂದಿದ್ದು ಸಮಾಜ ಒಳ್ಳೆಯ ಸಮಾಜಮುಖಿಚಿಂತನೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದು ನಿಮ್ಮದುಖಃದಲ್ಲಿ ನಾವು ಸಮಾನ ಭಾಗಿ ಶರತ್ ಹತ್ಯೆಯನ್ನುಉನ್ನತ ಮಟ್ಟದ ತನಿಖೆಗೆ ಹಾಗೂ ನೈಜ ಆರೋಪಿಗಳ ಬಂಧನಕ್ಕೆ ಸರಕಾರಕ್ಕೆಆಗ್ರಹಿಸುತ್ತೇನೆಎಂದು ಹೇಳಿದರು.sunil kumar9.7

ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ಉಳಿಪ್ಪಾಡಿ ರಾಜೇಶ್ ನಾೈಕ್,ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ,ಜಿ.ಪಂ ಸದಸ್ಯರಾದರವಿಂದ್ರ ಕಂಬಳಿ,ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತರಾಮ ಪೂಜಾರಿ ಸ್ಥಳಿಯರಾದ ಪ್ರವೀಣ್‍ಗಟ್ಟಿ,ದಯಾನಂದ ಬಿ.ಎಮ್, ಅಶೋಕ ಗಟ್ಟಿ, ನವೀನ್‍ಅಂಚನ್, ಸತೀಶ್ ಪೂಜಾರಿ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *