ಕೈಕಂಬ: ಭಗವಂತನ ಸಾನಿಧ್ಯದಲ್ಲಿ ಏಕಾಗ್ರತೆಯಿಂದ  ಪ್ರಾರ್ಥಿಸಿದರೆ     ಶಕ್ತಿ ನಿರ್ಮಾಣವಾಗಿ   ನಮಗೆ ಆರೋಗ್ಯ ನೆಮ್ಮದಿ ಶಾಂತಿ  ಪ್ರಾಪ್ತಿಯಾಗುತ್ತದೆ  ಧಾರ್ಮಿಕ  ಪ್ರಜ್ನೆ ಸಿಗಬೇಕಾದರೆ     ಧಾರ್ಮಿಕ ಚಿಂತನೆಗಳು ಪ್ರತಿನಿತ್ಯ ದೇವಸ್ಥಾನಗಳಲ್ಲಿ  ನಡೆಸಬೇಕು.  ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು ಅವರು  ಪೆರ್ಮಂಕಿ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆವರು ಆಶೀರ್ವಚನ ನೀಡಿ ಮಾತನಾಡಿದರು.  ಜನರಲ್ಲಿ ಜನಜಾಗೃತಿ ಮೂಡಿಸಲು ಇಂತಹ ದೇವಾಲಯದ ಪ್ರಮುಖರು ಮುಂದೆ ಬಂದು   ಧಾರ್ಮಿಕ ಪ್ರವಚನಗಳು ನಡೆಸಬೇಕು   ದೇವಳದ ವತಿಯಿಂದ ಸೇವಾಕೆಂದ್ರ   ಗಳನ್ನು ತೆರೆದು  ಊರಿನ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ   ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ಹೇಳಿದರು.6 27

6 28

6-1

6-21

6-22

6-23

6-24

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು , ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜೆ.ಕೃಷ್ಣ ಪಾಲೆಮಾರ್, ಶಾಸಕ ಮೊಹಿದೀನ್ ಬಾವ ಉಡುಪಿ ಸಾಯಿರಾಧಾ ಡೆವಲಪರ್ಸ್ ಮನೋಹರ ಶೆಟ್ಟಿ, ತಿರುವೈಲ್‍ಜಾಣು ಶೆಟ್ಟಿ ಮೆಮೋರಿಯಲ್ ವೆಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸೀತಾರಾಮ ಜಾಣುಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಜಾನಪದ ಚಿಂತಕ ಡಾ.ವೈ.ಎನ್ ಶೆಟ್ಟಿ, ಆಡಳಿತ ಮೊಕ್ತೇಸರ ಪದ್ಮನಾಭ ಶೆಟ್ಟಿ, ಪೆರ್ಮಂಕಿಗುತ್ತು ಚಂದ್ರಾಹಾಶ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ,ಸುದರ್ಶನ್ ಶೆಟ್ಟಿ,ರವಿರಾಜ್ ರಾವ್, ಕಿಶೋರ್ ಶೆಟ್ಟಿ,
ಮತ್ತಿತರರು ಉಪಸ್ಥಿತರಿದ್ದರು.  ರವೀಂದ್ರನಾಥ ಮಾರ್ಲ ಸ್ವಾಗತಿಸಿ  ರಾಜೀವ ಶೆಟ್ಟಿ ಸಲ್ಲಾಜೆ ವಂದಿಸಿ  ಪುರುಷೋತ್ತಮ ಭಂಡಾರಿ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *