ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ನೂತನ ಬ್ಯಾಂಕ್ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಮೊಗರ್ನಾಡು ಶ್ರೀ ನಾರಿಕುಂಭೇಶ್ವರ ದೇವಸ್ಥಾನದಲ್ಲಿ ನಡೆಯಿತು.

btw_oct15_1

ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಸೇವೆ ಸಲ್ಲಿಸಿದ ಬಳಿಕ ಸಂಘದ ಗೌರವ ಸಲಹೆಗಾರ ಗೋಪಾಲ ಸುವರ್ಣ ಆಮಂತ್ರಣ ಪತ್ರ ಬಿಡುಗೊಳಿಸಿದರು. ಅವರು ಮಾತನಾಡಿ ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನೂತನ ಬ್ಯಾಂಕ್ ಆರಂಭಿಸಿರುವುದು ಸಂತೋಷದ ಸಂಗತಿ. ಆ ಮೂಲಕ ಸಮಾಜದ ಮೂರ್ತೆದಾರರು ಹಾಗೂ ಎಲ್ಲಾ ವರ್ಗದ ಜನರ ಆರ್ಥಿಕ ಬೆಳವಣಿಗೆಗೆ ಬ್ಯಾಂಕ್ ಸಹಕಾರಿಯಾಗಲಿ ಎಂದು ಶುಭಹಾರೈಸಿದರು.

ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಮಾತನಾಡಿ ಏಳು ವರ್ಷಗಳ ಹಿಂದೆ ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವನ್ನು ಆರಂಭಿಸಲಾಗಿತ್ತು. ಇದೀಗ ಬ್ಯಾಂಕ್ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದು ನ.13ರಂದು ಮೊಗರ್ನಾಡು ಜಂಕ್ಷನ್‍ನಲ್ಲಿರುವ ಶ್ರೀ ಲಕ್ಷ್ಮೀ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಗೌರವ ಸಲಹೆಗಾರರಾದ ಬಿ.ವಿಶ್ವನಾಥ ಪೂಜಾರಿ, ಲೋಕಯ್ಯ ಪೂಜಾರಿ ಕುಂದಾಯಗೋಳಿ, ಮಾಜಿ ಪಂಚಾಯಿತಿ ಸದಸ್ಯ ಕೊರಗಪ್ಪ ಪೂಜಾರಿ ಕೆದ್ದೇಲ್, ಕೃಷಿಕ ಶ್ರೀನಿವಾಸ ಪೂಜಾರಿ ರಾಯಸ, ಮಾಜಿ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ಗಾಣಿಗ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರೇಮನಾಥ ಶೆಟ್ಟಿ ಅಂತರ, ನೀರಾ ಹಾಗೂ ತೆಂಗುಮೂರ್ತೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಶ ರಾಯಸ, ನರಿಕೊಂಬು ಯುವವಾಹಿನಿ ಘಟಕದ ವಾಮನ ಕರ್ಬೆಟ್ಟು, ಶಂಭೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಾಟಿ, ಮನೋಜ್ ನಿರ್ಮಲ್, ಸಂಘದ ಉಪಾಧ್ಯಕ್ಷ ಮಾಧವ ಕರ್ಬೇಟ್ಟು, ನಿರ್ದೇಶಕರಾದ ಅಶೋಕ್ ಆರ್, ರಾಜೇಶ ಶೇಡಿಗುರಿ, ಕೃಷ್ಣಪ್ಪ ಪೂಜಾರಿ, ಮೋನಪ್ಪ ಪೂಜಾರಿ, ಗಣೇಶ ಪೆಲ್ತಿಮಾರ್, ನಾರಾಯಣ ಪೂಜಾರಿ ಕೇದಿಗೆ, ಮೋನಪ್ಪ ಪೂಜಾರಿ, ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್, ಸಿಬ್ಬಂದಿ ಆಶಾ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *