ಮಂಗಳೂರು: ಹಿರಿಯ ಸಾಹಿತಿ, ಪ್ರಸಂಗಕರ್ತ ನಿತ್ಯಾನಂದಕಾರಂತ ಪೊಳಲಿ ಅವರಿಗೆ ಶೇಣಿಕಲೋತ್ಸವ ಪ್ರಶಸ್ತಿ, ಯಕ್ಷಗಾನದ ಹಿರಿಯಕಲಾವಿದ ನಿಡ್ಲೆಗೋವಿಂದ ಭಟ್ ಹಾಗೂ ಚೌಕಿ, ಪ್ರಸಾಧನ ಪರಿಚಾರಕ ಕುಶಲಪ್ಪ ನಾಯಕ್ ಅವರಿಗೆ ಕಲ್ಕೂರ ಯಕ್ಷಸಿರಿ ಪುರಸ್ಕಾರ ಪ್ರದಾನ ಸಮಾರಂಭ ಮಂಗಳೂರಿನ ಡಾನ್‍ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವಯಿತಿಯಿಂದ ಶೇಣಿ ಸಂಸ್ಮರಣೆ ಹಾಗೂ ಕಲೋತ್ಸವಕಾರ್ಯಕ್ರಮವನ್ನು ಶಾಸಕ ಜೆ. ಆರ್. ಲೋಬೋ ಉದ್ಘಾಟಿಸಿದರು. ಮಂಗಳೂರು ವಾಣಿಜ್ಯ ನಗರವಾಗಿ ವೇಗದಿಂದ ಬೆಳೆಯುತ್ತಿದ್ದರೂ ಸಾಂಸ್ಕೃತಿಕ ನಗರವಾಗಿ ಮಂಗಳೂರು ಉನ್ನತಿಕಾಣುತ್ತಿರುವುದು ಹೆಮ್ಮೆಯ ವಿಚಾರಎಂದು ಹೇಳಿದರು.ಕರಾವಳಿಯ ಸಾಂಸ್ಕೃತಿಕ ಪರಂಪರೆ ನಿತ್ಯ ನೂತನ ವಾಣಿಜ್ಯೀಕರಣದ ಸೊಗಡು ನಮ್ಮೊಳಗೆ ಬೆರೆತುಕೊಂಡರೂ ಸಾಂಸ್ಕೃತಿಕವಾದ ತನ್ಮಯತೆ ನಮ್ಮಿಂದ ದೂರವಾಗಿಲ್ಲ, ಶಿವರಾಮ ಕಾರಂತರಿಂದ ಆರಂಭವಾಗಿ ಇಲ್ಲಿಯವರೆಗೆ ಯಕ್ಷಗಾನ ಸೇರಿದಂತೆ ನಾನಾ ಸಾಂಸ್ಕೃತಿಕ ಲೋಕ ಬಗೆಬಗೆಯಾಗಿ ಪ್ರಕಟವಾಗಿದೆ.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ಸಾರಥ್ಯದಲ್ಲಿ ಸಾಂಸ್ಕೃತಿಕ ಕಲಾ ಜಗತ್ತಿಗೆ ಶಕ್ತಿ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿರುವುದು ಶಾಘ್ಲನೀಯ ಎಂದರು. ಯಕ್ಷಗಾನದ ಹಿರಿಯ ಕಲಾವಿದ ಕೋಳ್ಯೂರು ರಾಮಚಂದ್ರರಾವ್ ಶೇಣಿ ಸಂಸ್ಮರಣೆ ನಡೆಸಿದರು. ಪ್ರೀತಿ ಸಲುಗೆಯಿಂದ ಸರ್ವ ಕಲಾವಿದರನ್ನು ಜತೆಯಾಗಿ ಮನ್ನಡೆಸಿದ ಡಾ| ಶೇಣಿ ಗೋಪಾಲಕೃಷ್ಣ ಭಟ್ಟ ಅವರ ಯಕ್ಷ ಪಯಣ ಎಂದೆಂದಿಗೂ ಸ್ಮರಣೀಯ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಯಕ್ಷ ಸಭಾ ಅಧ್ಯಕ್ಷಕೆ.ಎಸ್. ಕಲ್ಲೂರಾಯ, ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು, ಪ್ರಮುಖರಾದ ಸದಾನಂದ ಪೆರ್ಲ, ತಾರಾನಾಥ ಹೊಳ್ಳ, ಜನಾರ್ದನ ಹಂದೆ ಉಪಸ್ಥಿತರಿದ್ದರು.ಜಿ.ಕೆ. ಭಟ್ ಸೇರಾಜೆ ಸ್ವಾಗಿಸಿದರು. ಮಂಜುಳಾ ಶೆಟ್ಟಿ ಹಾಗೂ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
