ಕೈಕಂಬ: ಗಂಜಿಮಠ ಭಾಮಾ ಕ್ಲಿನಿಕ್ ಇದರ ಅಂಗಸಂಸ್ಥೆಯಾಗಿರುವ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಮತ್ತು ಪಂಚಕರ್ಮ ಚಿಕಿತ್ಸಾ ಘಟಕ ಇದರ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಆರೋಗ್ಯ ಮಾಹಿತಿ ಶಿಬಿರ ಕಾರ್ಯಕ್ರಮ ಮಾ.25 ಬೆಳಿಗ್ಗೆ 9:30 ರಿಂದ 1 ರವರೆಗೆ ಗುರುಪುರ-ಕೈಕಂಬ ಮೆಗಾ ಪ್ಲಾಜಾ ಹಾಲ್ನಲ್ಲಿ ನಡೆಯಲಿದೆ.
ಪ್ರಗತಿಪರ ಕೃಷಿಕ ರಾಜೇಶ್ ನಾ ಕ್ ಉಳಿಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞ ಡಾ.ಮುರಳಿ ಕೇಶವ,ಆಯುರ್ ಸ್ಪರ್ಶ ಸಂಸ್ಥೆ ಮುಖ್ಯಸ್ಥ ಡಾ.ಸತೀಶ ಶಂಕರ ಬಿ,ಡಾ.ಶ್ರೀದೇವಿ ಆರ್.ಭಟ್ ಮುಂತಾದವರು ಉಪಸ್ಥಿತರಿರುವರು.
ಶಿಫಾಕ್ಲಿನಿಕ್ ಲ್ಯಾಬ್ ಇದರ ವತಿಯಿಂದ ರಕ್ತದ ವರ್ಗೀಕರಣ ಮತ್ತು ಮದುಮೇಹ(ಸಕ್ಕರೆ ಖಾಯಿಲೆ) ತಪಾಸಣೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
