ಮಂಗಳೂರು:ಮಂಗಳೂರಿನ ಹ್ರದಯ ಭಾಗದಲ್ಲಿ ಕೋರ್ಟ್ ರಸ್ತೆಯಲ್ಲಿ ರುವ ಗೋಳಿಮರದ ರೆಂಬೆಗೆ ನೈಲಾನ್ ಹಗ್ಗದಿಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.17ರಂದು ಬುಧವಾರ ರಾತ್ರಿ ನಡೆದಿರಬಹುದೆಂದು ಸಂಖಿಸಲಾಗಿದೆ.
ಫೆ.18ರಂದು ಬೆಳಗ್ಗೆ ಸಾರ್ವಜನಿಕರು ನೋಡಿ ಪೋಲಿಸರಿಗೆ ಸುದ್ದಿ ನೀಡಿದ್ದಾರೆ. ಪೋಲಿಸರು ಕೂಡಲೇ ಬಂದು ತನಿಕೆ ಚುರಕುಗೊಳಿಸಿದಾಗ ಯುವಕ ಕಾಸರಗೋಡಿನ ಬಿಜು ತೋಮಸ್ ಎಂದು ತಿಳಿದು ಬಂದಿದೆ. ಕೆ ಎ 19 ಎಮ್ ಸಿ 2208 ನಂಬರಿನ ರಿಟ್ಸ್ ಕಾರಿನಲ್ಲಿ ಬಂದು ಪಕ್ಕದಲ್ಲೇ ಪಾರ್ಕ್ ಮಾಡಿ ನೇಣುಹಾಕಿರಬಹುದು ಕಾರ್ ಬಾಡಿಗೆಗೆ ಪಡೆದದ್ದು ಎಂದು ತಿಳಿದುಬಂದಿದೆ. ಬಿಜು ಮಂಗಳೂರಿನ ಶ್ರೀನಿವಾಸ ಕಾಲೇಜು ವಿದ್ಯಾರ್ಥಿ ಯಾಗಿದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿರಬಹುದೆಂದು ಪೋಲಿಸರ ತನಿಕೆಯಿಂದ ಇನ್ನಷ್ಟೆ ಗೊತ್ತಾಗಬೇಕಾಗಿದೆ. ಶವವನ್ನು ಪೊಸ್ಟ್ಮಾರ್ಟ್ಂ ಗೆ ನಗರದ ಎನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.


