ಬಂಟ್ವಾಳ : ತುಳು ನಾಡಿನ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆಯೆಂದು ನ್ಯಾಯವಾದಿ ರಮೇಶ್ ಉಪಾಧ್ಯಾಯರು ನುಡಿದರು. ಅವರು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಇದರ ವತಿಯಿಂದ ಅನ್ನಪೂರ್ಣೇಶ್ವರಿ ಪೋಲೀಸ್ ಲೈನ್ ಮೈದಾನದಲ್ಲಿ ಜರಗಿದ ‘ ಚಿಣ್ಣರ ಚಿಲಿಪಿಲಿ-2015’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
KAR_1153

KAR_1150ನವರಾತ್ರಿ ದಿನದ ಸಂದರ್ಭದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ಶ್ಲಾಘನೀಯ ಎಂದು ನ್ಯಾಯವಾದಿ ಸುರೇಶ್ ಕುಮಾರ್ ನಾವೂರ ನುಡಿದರು.
ಈ ಸಂಸ್ಥೆಯಿಂದ ಯುವ ಪ್ರತಿಭೆ ಗಳಿಗೆ ಅವರ ಪ್ರತಿಭೆ ಯನ್ನು ಗುರುತಿಸುವ ಕೆಲಸ ಆಗುತ್ತಾ ಇದೆ ಎಂದು ಚಿಣ್ಣರ ಚಿಲಿಪಿಲಿ ಉತ್ಸವದ ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ , ತಾಲೂಕು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ನ್ಯಾಯವಾದಿ ಉಮೇಶ್ ಕುಮಾರ್ ವೈ, ಚಿಣ್ಣರ ಅಧ್ಯಕ್ಷೆ ವಂಶ ಎನ್ ಭಂಡಾರಿ, ಪುರಸಭಾ ಸದಸ್ಯ ಸದಾಶಿವ ಬಂಗೇರಾ, ಗೌರವಾನ್ವಿತ ಸಲಹೆಗಾರರಾದ ಪ್ರೋ.ತುಕಾರಾಮ ಪೂಜಾರಿ , ಮಂಜು ವಿಟ್ಲ, ಡಿ.ಎಂ.ಕುಲಾಲ್,ನ್ಯಾಯವಾದಿ ವಿನಯ ನಾಯಕ್ ಉಪಸ್ಥಿತರಿದ್ದರು. ಯಕ್ಷ ತರ ಬೇತುದಾರರಾದ ಅರುಣ್ ಕುಮಾರ್ ಧರ್ಮಸ್ಥಳ , ಸಂಗೀತ ವಿದ್ವಾನ್ ವೆಂಕಟಗಿರಿ ಕೃಷ್ಣ , ಸಂಘಟಕಿಯರಾದ ಜಯಶ್ರೀ ಜಯಕುಮಾರ್, ಅಶ್ವಿನಿ ಕೃಷ್ಣ , ಲತಾ ಉಮೇಶ್ ಕುಮಾರ್ ವೈ. , ಚೇತನಾ ದೇವಪ್ಪ ರವರನ್ನು ಸೇಸಪ್ಪ ಕೋಟ್ಯಾನ್ ಸನ್ಮಾನಿಸಿದರು. ಅಧ್ಯಕ್ಷ ಸುಭಾಸ್ಚಂದ್ರ ಜೈನ್ ಸ್ವಾಗತಿಸಿದರು. ಶ್ರೀನಿವಾಸ್ ಭಂಡಾರಿ ವಂದಿಸಿ , ಲ/ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *