ಬಂಟ್ವಾಳ : ಮಾಣಿ ವಲಯ ಬಿಎಂಎಸ್ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಕುಲಾಲ್ ಸೂರಿಕುಮೇರು ಆಯ್ಕೆಯಾಗಿದ್ದಾರೆ.
16 Aug Ganesh Kulal copyಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಗಣೇಶ್ ಪೆರ್ಲಾಪು, ರಾಮಣ್ಣ ಮೂಲ್ಯ ಪೇರಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ ಅನಂತಾಡಿ, ಜೊತೆ ಕಾರ್ಯದರ್ಶಿಗಳಾಗಿ ಸಂಶೀರ್ ಬುಡೋಳಿ, ಹರೀಶ್ ಬೊಲ್ಲುಕಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ಹೊನ್ನಪ್ಪ ಮಾಣಿ, ಕೋಶಾಧಿಕಾರಿಯಾಗಿ ಚಂದಪ್ಪ ಸುವರ್ಣ ಮಾಣಿ, ಗೌರವಾಧ್ಯಕ್ಷರಾಗಿ ಎಂ. ನಾಗರಾಜ ಶೆಟ್ಟಿ ಮಾಣಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಉಮೇಶ್ ಕುಮಾರ್ ವೈ. ಹಾಗೂ ಗೌರವ ಸಲಹೆಗಾರರಾಗಿ ಉಮ್ಮರ್ ಎಸ್. ಬುಡೋಳಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಕಾರ್ಯಕಾರಿ ಸಮಿತಿಗೆ 12 ಮಂದಿ ಸದಸ್ಯರನ್ನು ನೇಮಿಸಲಾಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

By Suddi9

Leave a Reply

Your email address will not be published. Required fields are marked *