ಕಲ್ಲಡ್ಕ : ಪೆರಾಜೆ ಗ್ರಾಮದ ಜನತೆಯ ಕಷ್ಟ ನಷ್ಟಗಳಿಗೆ ಸ್ಪಂದನೆ, ಶೈಕ್ಷಣಿಕ ಸಾಮಾಜಿಕ ಚಿಂತನೆ, ಹಿಂದುತ್ವದ ಪರಿಕಲ್ಪನೆಯೊಂದಿಗೆ ಸಹಬಾಳ್ವೆಯೆಂಬ ಧ್ಯೇಯ ವಾಕ್ಯದೊಂದಿಗೆ ದೇಶಭಕ್ತ ಯುವಕರ ಯುವ ವೇದಿಕೆ ಪೆರಾಜೆ ಎಂಬ ಹೆಸರಿನ ವಿಶಿಷ್ಟ ಸಂಘಟನೆ ರವಿವಾರ ಅಸ್ತಿತ್ವಕ್ಕೆ ಬಂದಿತು.

DSC00149

DSC00187ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ವಠಾರದಲ್ಲಿ ಸೇವಾ ಸಮಿತಿ ಸದಸ್ಯ ಗೋವಿಂದ ಭಟ್ ಮುದ್ರಜೆಯುವ ವೇದಿಕೆಯನ್ನು ಉದ್ಘಾಟಿಸಿದರು. ಪುತ್ತೂರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ದಿಕ್ಸೂಚಿ ಭಾಷಣ ಮಾಡಿ, ಸಮಾಜದಲ್ಲಿ ಶೋಷಿತರ ರಕ್ಷಣೆ, ದುರ್ಬಲರಿಗೂ ಸ್ವಾತಂತ್ರ್ಯ, ಸಮಾನತೆ ಸಿಗುವಂತಾಗಲು ಹಿಂದೂ ಯುವಕರು ಸಂಘಟಿತರಾಗಬೇಕು. ದೇಶದಲ್ಲಿ ನಡೆಯುತ್ತಿರುವ ಅನ್ಯಮತೀಯ ಭಯೋತ್ಪಾದಕರ ಸಮಾಜದ್ರೋಹಿ ಕೃತ್ಯಗಳನ್ನು ತಡೆಯಬೇಕಾಗಿದೆ. ಮತಾಂಧ ಚಟುವಟಿಕೆಯನ್ನು ತಡೆಯಲು, ಸುತ್ತಮುತ್ತಲು ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲು ಹಾಗೂ ಮಠ, ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಹಿಂದೂ ಯುವಕರು ತಮ್ಮಲ್ಲಿರುವ ಜಾತಿ ವೈಮನಸ್ಸು ವೈಯಕ್ತಿಕ ದ್ವೇಷಗಳನ್ನು ಮರೆತು ಹಿಂದೂಗಳಾಗಿ ಒಂದಾಗಿರಬೇಕೆಂದರು. ರಕ್ಷಾ ಬಂಧನ ಉತ್ಸವವನ್ನು ಸಾಮೂಹಿಕವಾಗಿ ಆಚರಿಸಿ ಸಂಘಟನೆ ಬಲಪಡಿಸಬೇಕೆಂದು ಕರೆ ನೀಡಿದರು.
ಪೆರಾಜೆಗುತ್ತು ಶ್ರೀಕಾಂತ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ ಯುವಕರು ಧರ್ಮ ಮಾರ್ಗದಲ್ಲಿ ಹೋರಾಟ ಮಾಡುವಲ್ಲಿ ಯುವ ವೇದಿಕೆ ಸಿದ್ಧವಾಗಬೇಕು ಎಂದರು.
ಹಿಂದೂ ಜಾಗರಣೆಯ ತಾಲೂಕು ಕಾರ್ಯದರ್ಶಿ ಗಣರಾಜ ಭಟ್ ಕೆದಿಲ ಅವರು ಸಂಘಟನೆಯ ಜವಾಬ್ದಾರಿಯನ್ನು ವಿವರಿಸಿದರು. ಕಡೇಶ್ವಾಲ್ಯ ಜಾಗರಣ ವೇದಿಕೆ ಅಧ್ಯಕ್ಷ ಶ್ರುತಿನ್ ಶೆಟ್ಟಿ, ನೇರಳಕಟ್ಟೆ ಯಂಗ್ ಚಾಲೆಂಜರ್ ಕ್ರೀಡಾ ಸಂಘದ ಅಧ್ಯಕ್ಷ ಶೀತಲ್ ಗಣೇಶನಗರ, ದುರ್ಗಾಪರಮೇಶ್ವರೀ ಭಜನಾ ಮಂದಿರದ ಕೋಶಾ„ಕಾರಿ ತನಿಯಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ನೂತನ ಪದಾ„ಕಾರಿಗಳ ಪದಗ್ರಹಣವನ್ನು ನೆರವೇರಿಸಿ, ಮಾತಿಗೆ ಬದ್ಧ, ಸೇವೆಗೆ ಸಿದ್ಧ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಜ್ಞಾವಿ„ ಬೋ„ಸಲಾಯಿತು. ಅಧ್ಯಕ್ಷ ಅಜಿತ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಯತಿರಾಜ್ ಮಿತ್ತಪೆರಾಜೆ ಸ್ವಾಗತಿಸಿ, ಅನಿಲ್ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ರಾಜಾರಾಮ ಕಾಡೂರು ವಂದಿಸಿದರು.

By Suddi9

Leave a Reply

Your email address will not be published. Required fields are marked *