ವಿಠಲ ವಿದ್ಯಾ ಸಂಘದ ಆಶ್ರಯದಲ್ಲಿ, ಸಾಹಿತ್ಯ ಸಂಘ, ವಿಠಲ ಪ್ರೌಢ ಶಾಲೆ ಮತ್ತು ಯಕ್ಷಸಿಂಧೂರ ಪ್ರತಿಷ್ಠಾನ (ರಿ) ವಿಟ್ಲ ಇವುಗಳ ಸಹಯೋಗದಲ್ಲಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ `ಯಕ್ಷಗಾನ ನೃತ್ಯ’ ತರಬೇತಿ ಯ ಉದ್ಘಟನಾ ಕಾರ್ಯಕ್ರಮವು ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಯಕ್ಷ ಗುರು ವಿಶ್ವೇಶ್ವರ ಭಟ್ `ಯಕ್ಷಗಾನವು ಸರ್ವಜನ ಮನೋರಂಜಕವಾದ ಸಮೃದ್ಧ ಕಲೆ. ಶಾಸ್ತ್ರೀಯವಾಗಿ ವಿದ್ಯಾರ್ಥಿಗಳು ನೃತ್ಯವನ್ನು ಕಲಿತರೆ ಯಕ್ಷಗಾನದಲ್ಲೂ ಮುಂದಿನ ಪೀಳಿಗೆಯನ್ನು ಉಳಿಸುವಲ್ಲಿ ಗಣನೀಯ ಕೊಡುಗೆಯನ್ನು ನೀಡಿದಂತಾಗುತ್ತದೆ’ ಎಂದರು. ಅಧ್ಯಕ್ಷತೆಯನ್ನು ಅರ್ಥದಾರಿ ನೀರ್ಕಜೆ ಈಶ್ವರ ಭಟ್ ವಹಿಸಿದ್ದರು. ಪ್ರಸ್ತಾವನೆ ಮಾಡಿದ ಪ್ರತಿಷ್ಠಾನದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್ ಪ್ರತೀ ಶನಿವಾರ ಅಪರಾಹ್ನ ಯಕ್ಷಗಾನ ನೃತ್ಯ ತರಬೇತಿ, ಶುಕ್ರವಾರ ಅಪರಾಹ್ನ ಹಿಮ್ಮೇಳ ವಾದನ ತರಬೇತಿಯನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಗುತ್ತದೆ ಎಂದರು. ಕಲಾವಿದ ಕಾರ್ತಿಕ್ ಕರ್ಗಲ್ಲು ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ಸ್ವಾಗತಿಸಿದರು. ಶಿಕ್ಷಕ ರಮೇಶ್ ಬಿ ಕೆ ನಿರೂಪಿಸಿ ವಂದಿಸಿದರು. ಅಭಿಷೇಕ ಹಾಗೂ ಪ್ರಭಾ ಸಹಕರಿಸಿದರು
