ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ನೀಡಿದ ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಕೊಡಂಗಾಯಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜು. 12 ರಂದು ಸಂಜೆ ಜರಗಿತು.
vp (1)

DSC_0984
ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಧ್ಯಕ್ಷತೆ ವಹಿಸಿದ ವಿಟ್ಲದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ನಾಗರಾಜ ಶೆಟ್ಟಿ , ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಕಾರ್ಯದರ್ಶಿ  ರಾಮದಾಸ ಬಂಟ್ವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ರೈ ಬೋಳಂತೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೇವಿದಾಸ ಇವರು ಭಾಗವಹಿಸಿದ್ದರು. ಗ್ರಾಮ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಪಂಜಿಗದ್ದೆ, ಗ್ರಾಮ ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷೆ ಸುಧಾ ಎಸ್ ಶೆಟ್ಟಿ, ಸದಸ್ಯರುಗಳಾದ ನಾಗೇಶ್ ಶೆಟ್ಟಿ, ಜಯಂತ ಪಿ, ಶಾಲಿನಿ ಪಿ, ರೇಷ್ಮಾ ಶಂಕರಿ ಬಳಿಪಗುಳಿ, ಸೌಮ್ಯ ಟಿ, ಪ್ರೇಮಲತಾ, ಭಾಸ್ಕರ ಶೆಟ್ಟಿಗಾರ್ ಹಾಗೂ ದಾಕ್ಷಾಯಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಚಂದಪ್ಪ ರೈ ಮತ್ತು ಉಮೇಶ್ ಶೆಟ್ಟಿ ತಾರ್ಯಡ್ಕ ಇವರನ್ನು ಗೌರವಿಸಲಾಯಿತು. ಗ್ರಾಮ ಸಮಿತಿ ಕಾರ್ಯದರ್ಶಿ  ರಾಧಾಕೃಷ್ಣ ಪೂರ್ಲಪ್ಪಾಡಿ ಸ್ವಾಗತಿಸಿದರು. ಗ್ರಾಮ ಪಂ ಮಾಜಿ ಅಧ್ಯಕ್ಷ ರವಿಶಂಕರ ಬಳಿಪಗುಳಿ ಪ್ರಸ್ತಾವಿಸಿದರು. ತಾ ಪಂ ಮಾಜಿ ಸದಸ್ಯೆ ಧರ್ಮಾವತಿ ಪಿ ಬಿ ವಂದಿಸಿದರು. ಗಣೇಶ್ ಬಾರೆಬೆಟ್ಟು ನಿರೂಪಿಸಿದರು

By Suddi9

Leave a Reply

Your email address will not be published. Required fields are marked *