ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ ಯಜಮಾನ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಟಿ. ವರದರಾಜ್ ಪೈ ಇವರಿಗೆ ಉದ್ಯಮ ರಂಗದ ಗಣನೀಯ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ ಮತ್ತು ಕೇರಳ ಗಡಿನಾಡ ಘಟಕ ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಜ್ಯ ಸರ್ಕಾರಿ ಮಾರುಕಟ್ಟೆ ಕನ್ಸಲ್ಟೆಂಟ್ ಏಜೆನ್ಸಿ ಅಧ್ಯಕ್ಷ ಎಲ್.ಎನ್.ಮೂರ್ತಿ, ಕಾಸರಗೋಡು ಎಸ್ಪಿ ಶ್ರೀನಿವಾಸ್, ಮಂಜೇಶ್ವರ ತಹಶೀಲ್ದಾರ್ ಶಶಿಧರ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರಣವ ಕಾಲೇಜು ಮುಖ್ಯಸ್ಥ ಅಜೇಯ್ ಪೈ, ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಕೇಶವ ಪ್ರಸಾದ್ ನಾಣಿಹಿತ್ತಿಲು, ಸಂಚಾಲಕ ವಸಂತ ಕುಮಾರ್ ಪಿ.ಕೆ. ಮತ್ತಿತರರು ಇದ್ದರು.
