ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಮರದ ಮಿಲ್ಲೊಂದರ ಬಳಿ ಮನೆಯ ಆವರಣ ಗೋಡೆಗೆ ತಾಗಿಕೊಂಡಂತೆ ಅಳವಡಿಸಿರುವ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಮೌನವಾಗಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ ನಿವಾಸಿ ಪ್ರಭಾ ಜಿ.ನಾಯ್ಕ ಎಂಬವರು ಮನೆಯಲ್ಲಿ ಇಲ್ಲದ ವೇಳೆ ಇವರ ಆವರಣ ಗೋಡಗೆ ತಾಗಿಕೊಂಡಂತೆ ವಿದ್ಯುತ್ ಕಂಬ ಅಳವಡಿಸಲಾಗಿದೆ. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಭಾರೀ ಆತಂಕ ಉಂಟಾಗಿದೆ ಎಂದು ಅವರು ದೂರಿಕೊಂಡಿದ್ದಾರೆ.
