ಮುಂಬಯಿ: ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳಿಗೆ ಮತ್ತೊಮ್ಮೆ ಐಸಿಎಸ್‍ಇ ಪರೀಕ್ಷೆಗಳಲ್ಲಿ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಸಂಸ್ಥೆಯ ಮುಂಬಯಿ ಮತ್ತು ನವ ಮುಂಬಯಿಯಾದ್ಯಂತದ ರಾಯಾನ್ ಶಾಲೆಗಳಲ್ಲಿ ಶೇಕಡಾವಾರು ಅಂಕ ಗಳಿಕೆಯಲ್ಲಿ ಗಣನೀಯ ಹೆಚ್ಚಳವಾಗಿರುವುದಕ್ಕಾಗಿ ರಾಯನ್ ಶೈಕ್ಷಣಿಕ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಮೇಡಂ ಗ್ರೇಸ್ ಪಿಂಟೋ ಹರ್ಷ ವ್ಯಕ್ತ ಪಡಿಸಿದ್ದಾರೆ.
ಭಾರತದಲ್ಲಿ 125ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಭಾರತದ ಬೃಹತ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಆಗಿರುವ ರಿಯಾನ್ ಶಾಲೆಗಳು ಮುಂಬಯಿ ಮತ್ತು ನವಮುಂಬಯಿಯಾದ್ಯಂತದ ಎಲ್ಲಾ ಶಾಲೆಗಳಲ್ಲಿ 2015ರ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್‍ಇ ಪರೀಕ್ಷೆಗಳಲ್ಲಿ ಮತ್ತೊಮ್ಮೆ ನೂರು ಶೇಕಡಾ ಫಲಿತಾಂಶ ಸಾಧಿಸಿ ರಿಯಾನ್ ಶಾಲೆಗಳ ಸಾಧನೆಯನ್ನು ಭಾರತ ಮತ್ತು ವಿದೇಶದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಯನ್ ಸ್ಕೂಲ್‍ಗಳಾದ ಗೋರೆಗಾಂವ್, ಮಲಾಡ್, ಕಾಂದಿವಿಲಿ, ನೆರೂಳ್ ಮತ್ತು ಖಾರ್‍ಘರ್ ಸೇರಿದಂತೆ ಎಲ್ಲಾ ಶಾಲೆಗಳ ಮಕ್ಕಳ ಶೇಕಡಾವಾರು ಅಂಕ ಗಳಿಕೆಯಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ. ಮುಂಬಯಿ ಯ ಎಲ್ಲಾ ಶಾಲೆಗಳ ಸರಿಸುಮಾರು 25 ಶೇಕಡಾ ವಿದ್ಯಾರ್ಥಿಗಳು 90 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ ಮತ್ತು 70 ಶೇಕಡಾ ವಿದ್ಯಾರ್ಥಿಗಳು 75 ಶೇಕಡಾ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
98.2 ಶೇಕಡಾ ಅಂಕ ಪಡೆದ ಕಹ್ರಘರ್ ಆರ್‍ಸ್ಕೂಲ್‍ನ ಟಾಟಾಸ್ ಚಕ್ರವರ್ತಿ ಮತ್ತು ಮುಂಬಯಿಯ ಕೇಂಬ್ರಿಡ್ಜ್ ಶಾಲೆಯ ಸಾಕ್ಷಿ ಪಾಲ್ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯಿಂದ ವಿದ್ಯಾರ್ಥಿಗಳು ಪುಳಕಿತರಾಗಿದ್ದಾರೆ. ಈ ಉತ್ಸಾಹ ವಿದ್ಯಾರ್ಥಿ , ಟಾಟಾಸ್ ನುಡಿಗಳಲ್ಲಿ ಹೊರಬಂದಿದ್ದು ಹೀಗೆ “ನಾನು ಮೊದಲನೆಯದಾಗಿ ದೇವರಿಗೆ ಕೃತಜ್ಞತೆ ಅರ್ಪಿಸುತ್ತೇನೆ, ಇದೇ ವೇಳೆ ನನಗೆ ಮಾರ್ಗದರ್ಶನ ನೀಡಿ, ನನ್ನನ್ನು ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಯಾಗಿ ರೂಪಿಸಿದ ಖರ್ಗರ್ ಆರ್‍ಶಾಲೆಯ ಅಧ್ಯಕ್ಷರಾದ ಡಾ ಎಎಫ್ ಪಿಂಟೋ, ನನ್ನ ಶಿಕ್ಷಕರು, ಎಲ್ಲಾ ಸಿಬ್ಬಂದಿಗಳು ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಪ್ರತಿಮ ಸಾಧನೆಗೆ ವಿದ್ಯಾರ್ಥಿ ಗಳಿಗೆ ಶುಭಾಶಯ ಹೇಳಿದ ಮೇಡಂ ಗ್ರೇಸ್ ಪಿಂಟೋ “ನಮ್ಮ ವಿದ್ಯಾರ್ಥಿಗಳು ನಿಜವಾಗಿಯೂ ಅತ್ಯಂತ ಸ್ಪೂರ್ತಿದಾಯಕ ಸಾಧನೆಯನ್ನೇ ಮಾಡಿದ್ದಾರೆ. ರಾಯನ್ ಸಮೂಹವು ಇದೇ ರೀತಿ ಯುವ ಜನಾಂಗವನ್ನು ಮತ್ತು ದೇಶದ ಭಾವೀ ಪ್ರಜೆಗಳನ್ನು ಬೆಳೆಸಿ ಮುನ್ನಡೆಸುವ ಯತ್ನದಲ್ಲಿ ಮುಂದುವರಿಯುತ್ತದೆ, ಇದೇ ವೇಳೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳುತ್ತಾ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕ ಶಕ್ತಿಯಾದ ಜೀಸಸ್ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಪ್ರೇರಣೆ ನೀಡಿದ ಹೆತ್ತವರು, ಶಾಲಾ ಸಿಬ್ಬಂದಿಗಳು, ಅಧಿಕಾರಿಗಳು, ಶಿಕ್ಷಕವರ್ಗಗಳಿಗೆ ಮನಪೂರ್ವಕ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.
