ತುಂಬೆ: ತಾಲ್ಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಕಳೆದ ಸತತ 21 ವರ್ಷಗಳಿಂದ ಶೇ 100 ಫಲಿತಾಂಶ ದಾಖಲಾಗಿದ್ದು, ಈ ಬಾರಿಯೂ ಶೇ. 100 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಿಂದ ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಸುಹೈಬಾ ಇವರಿಗೆ ಒಟ್ಟು 557 ಅಂಕ ದೊರೆತಿದ್ದು, ವ್ಯವಹಾರ ಅಧ್ಯಯನದಲ್ಲಿ ಈಕೆಗೆ 100 ಅಂಕ ದೊರೆತಿದೆ.
ಕಲಾ ವಿಭಾಗದಿಂದ 39 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿ ಶೇ 100% ಫಲಿತಾಂಶ ದಾಕಲಾಗಿದೆ. ರಮ್ಲತ್ ಇವರಿಗೆ ಒಟ್ಟು 461 ಅಂಕ ದೊರೆತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಿಂದ ಒಟ್ಟು 26 ವಿದ್ಯಾರ್ಥಿಗಳ ಪೈಕಿ 25 ಮಂದಿ ಉತ್ತೀರ್ಣರಾಗಿ ಶೇ 94 ಫಲಿತಾಂಶ ದಾಖಲಾಗಿದೆ. ಖತೀಜ ಸಹ್ಲಾ ಇವರಿಗೆ ಒಟ್ಟು 531 ಅಂಕ ದೊರೆತಿದ್ದು, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

