ಕುಂದಾಪುರ: ಹಿಟ್ ಆ್ಯಂಡ್ ರನ್‍ಗೆ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರದ ಮೊವಾಡಿ ಕ್ರಾಸ್ ಸಮೀಪದ ತ್ರಾಸಿ ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ್ದು, ಯುವಕನ ಸಾವಿಗೆ ಕಾರಣವಾದ ಅಪರಿಚಿತ ವಾಹನದ ಹಿಂದೆ ಪೊಲೀಸರು ಬೆನ್ನು ಬಿದ್ದಿದ್ದಾರೆ.
ಮೃತ ಯುವಕನನ್ನು ಗಂಗೊಳ್ಳಿಯ ಮಹಾಕಾಳಿ ಮಠ ಸಮೀಪದ ಮಂಜುನಾಥ್ ಖಾರ್ವಿ ಎಂಬವರ ಪುತ್ರ ಅವಿನಾಶ್ ಖಾರ್ವಿ(24) ಎಂದು ಎಂದು ಗುರುತಿಸಲಾಗಿದೆ.

ಅವಿನಾಶ್ ನಿನ್ನೆ ತಡರಾತ್ರಿ ತನ್ನ ಗೆಳೆಯ ಸತೀಶ್ ಖಾರ್ವಿ ಎಂಬಾತನನ್ನು ತನ್ನ ಬೈಕ್‍ನಲ್ಲಿ ಕುಂದಾಪುರಕ್ಕೆ ಬಿಟ್ಟು ಗಂಗೊಳ್ಳಿಗೆ ಹಿಂದಿರುಗಿದಾಗ ಮುಳ್ಳಿಕಟ್ಟೆ ಎಂಬಲ್ಲಿ ಅಪರಿಚಿತ ವಾಹನ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
