ಬಂಟ್ವಾಳ : ಬಡಗಬೆಳ್ಳೂರು ವಾರಟೀಲು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.


ಬಂಟ್ವಾಳ ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ , ಇಂಜಿನಿಯರ್ ಕೃಷ್ಣ ಉಪತಹಶಿಲ್ದಾರ್ ರೋಹಿನಾಥ್ , ಕಂದಾಯ ಅಧಿಕಾರಿ ನಾರಾಯಣ ಪೂಜಾರಿ ,ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ , ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ , ಗ್ರಾ.ಪಂ.ಅಧ್ಯಕ್ಷೆ ವೇದಾವತಿ , ತಾ.ಪಂ.ಸದಸ್ಯೆ ಗುಣವತಿ , ಗುತ್ತಿಗೆದಾರ ಕೆ.ಎಂ.ಅಬೂಬ್ಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು .
