ಬಂಟ್ವಾಳ ತಾಲ್ಲೂಕಿನ ತುಂಬೆ ಪ್ರೌಢಶಾಲೆಯಲ್ಲಿ ಸರ್ಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ಮಂಜೂರಾದ 31 ಉಚಿತ ಸೈಕಲ್ನ್ನು ಜಿ.ಪಂ.ಸದಸ್ಯೆ ಮಮತಾ ಎಸ್.ಗಟ್ಟಿ ಅವರು ಈಚೆಗೆ ವಿತರಿಸಿದರು. ಮುಖ್ಯಶಿಕ್ಷಕ ಶ್ರೀನಿವಾಸ ಕೆದಿಲ, ಪ್ರಾಂಶುಪಾಲ ಗಂಗಾಧರ ಆಳ್ವ, ಅಧೀಕ್ಷಕ ಅಬ್ದುಲ್ ಕಬೀರ್, ದೈಹಿಕ ಶಿಕ್ಷಕ ಜಗದೀಶ ರೈ ಮತ್ತಿತರರು ಇದ್ದರು.
