ಬಂಟ್ವಾಳ; ಹಾವಿನ ಹುತ್ತದಲ್ಲಿ ನಿಧಿಗಾಗಿ ರಾತೋರಾತ್ರಿ ಶೋಧ ನಡೆಸಿದ ಘಟನೆ ಕಾವಳಪಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಾವಳಪಡೂರು ಹಾಗೂ ಮೂಡುಪಡುಕೋಡಿ ಗ್ರಾಮದ ಗಡಿಭಾಗದಲ್ಲಿರುವ ಬೇಂಗತ್ತೋಡಿ ನಾಗಬನದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರಿಗೆ ಅಚ್ಚರಿಯನ್ನುಂಟುಮಾಡಿದೆ.

ಸಾವಿರ ವರ್ಷಗಳ ಇತಿಹಾಸವುಳ್ಳ ಈ ನಾಗಬನದಲ್ಲಿ ನೂತನ ನಾಗನಕಟ್ಟೆ ನಿಮರ್ಾಣಕ್ಕೆ ಬುಧವಾರ ದಿನನಿಗದಿಪಡಿಸಲಾಗಿದ್ದು, ಇದರ ಮುನ್ನಾ ದಿನವೇ ಅಪರಿಚಿತರು ನಿಧಿಗಾಗಿ ಶೋಧ ನಡೆಸಿರುವುದು ಸ್ಥಳೀಯವಾಗಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಪಟೇಲ್ ಹೌಸ್ ಎಂದು ಕರೆಯಲ್ಪಡುತ್ತಿದ್ದ ಈ ಜಮೀನು ನರಸಿಂಹಾಚಾರ ಎಂಬವರಿಗೆ ಸೇರಿದ್ದಾಗಿದ್ದು, ಬಳಿಕ ಅವರು ಬೆಳ್ತಂಗಡಿಯ ಕ್ರಿಶ್ಚಿಯನ್ ಸಮುದಾಯದವರಿಗೆ ಜಮೀನು ಮಾರಾಟ ಮಾಡಿ ಮೈಸೂರಿಗೆ ತೆರಳಿದ್ದರು.
ಈ ಮಧ್ಯೆ ಅನಾಥ ವಾಗಿದ್ದ 18 ನಾಗನ ಕಲ್ಲುಗಳ ನಾಗಬನಕ್ಕೆ ಗ್ರಾಮಸ್ಥರು ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು. 2 ವರ್ಷದ ಹಿಂದೆ ಈ ನಾಗಬನವನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಸ್ಥಳ ಪ್ರಶ್ನೆಯನ್ನು ಇರಿಸಲಾಗಿದ್ದು, ಈ ವೇಳೆ ಈ ನಾಗಬನದಲ್ಲಿ ನೂತನ ಕಟ್ಟೆ ನಿಮರ್ಾಣವಾಗಬೇಕು, ಹುತ್ತದಲ್ಲಿ ನಾಗನ ಸಾನಿಧ್ಯವಿದೆ, ನಿಧಿಯಿದೆ, ಪೂಜೆ ನಿರಂತರವಾಗಬೇಕು ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ಸಮಿತಿ ರಚಿಸಿ ನಾಗನಕಟ್ಟೆ ಅಭಿವೃದ್ದಿ ಕಾರ್ಯಕ್ಕೆ ಮುಂದಾಗಿದ್ದರು. ಅದರಂತೆ ಬುಧವಾರ ನೂತನ ಕಟ್ಟೆ ನಿಮರ್ಾಣದ ಶಂಕುಸ್ಥಾಪನೆಗೆ ದಿನ ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗನಕಲ್ಲುಗಳನ್ನು ಬಾಲಲಯ ದಲ್ಲಿ ಪ್ರತಿಷ್ಠಾಪಿಸಿದ್ದರು.
ಮಂಗಳವಾರ ರಾತ್ರಿ ಬಾಲಲಯದ ಹಿಂದಿದ್ದ ಹುತ್ತಗಳನ್ನು ಅಗೆದು ನಿಧಿಗಾಗಿ ಶೋಧ ನಡೆಸಿರುವುದು ಗೊತ್ತಾಗಿದೆ. ನಿಧಿಗಾಗಿ ಶೋಧ ನಡೆಸಿದವರಿಗೆ ನಿಧಿ ದೊರಕಿದೆಯೇ ಇಲ್ಲವೋ ಎಂಬುದೂ ಕೂಡ ಗೊತ್ತಾಗಿಲ್ಲ. ಈ ಬಗ್ಗೆ ಸ್ಥಳೀಯ ಗ್ರಾ,ಪಂ, ಸದಸ್ಯ ಶಂಕರ ಶೆಟ್ಟಿಯವರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಾ.ಪಂ ಸದಸ್ಯ ಪದ್ಮಶೇಖರ ಜೈನ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
