ಸಾಂದರ್ಭಿಕ ಚಿತ್ರ

ನವದೆಹಲಿ: ಒಂದು ವೇಳೆ ಮತಾಂತರ ನಿಲ್ಲಿಸದಿದ್ದರೆ, ಇಡೀ ದೇಶದ ವಿರುದ್ಧ ಯುದ್ಧ ಸಾರುತ್ತೇವೆ, ಎಂದು ಮುರಾದಾಬಾದ್‌ನ ಸಲೀಂ ಅಹಮ್ಮದ್ ಎಂಬ ಮುಸಲ್ಮಾನ ಧರ್ಮಗುರು ಬೆದರಿಕೆಯ ಸ್ವರದಲ್ಲಿ ಎಚ್ಚರಿಕೆ ನೀಡಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

 

ಆಗ್ರಾದ ಮತಾಂತರಿತ ಮುಸಲ್ಮಾನರು ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದರು. ಒಂದು ವೇಳೆ ಮುಸಲ್ಮಾನರ ಮತಾಂತರ ನಡೆಯುತ್ತಿದ್ದರೆ, ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರು ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕು; ಏಕೆಂದರೆ ಅವರಿಗೆ ಇದು ಒಳ್ಳೆಯದಲ್ಲ ಮತ್ತು ಯಾರೂ ಜೀವಂತವಿರಲಾರರು, ಎಂದೂ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ ಯಾದವರಿಗೆ ಎಚ್ಚರಿಕೆ ನೀಡಿದ್ದಾರೆ.

ಮುರಾದಾಬಾದ ಜಿಲ್ಲೆಯ ಬಾಬರಿ ಮಸೀದಿ  ಸಮಿತಿಯ ವತಿಯಿಂದ ಡಿಸೆಂಬರ್ ೧೩ರಂದು ಒಂದು ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರಕ್ಷಕರು ಮತ್ತು ಆಡಳಿತಾಧಿಕಾರಿಗಳ ಸಹಿತ ೧೫೦೦ ಮಂದಿ ಉಪಸ್ಥಿತರಿದ್ದರು. ಆದರೆ ಈ ರೀತಿ ಉದ್ರೇಕಕಾರಿಯಾಗಿ ಮಾತಾಡಿದ ಮೌಲ್ವಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎನ್ನಲಾಗುತ್ತಿದೆ

By Suddi9

Leave a Reply

Your email address will not be published. Required fields are marked *